ಡಿಡಿ ವಾಹಿನಿಯ ಉದ್ಯೋಗಿಗೆ ಕೊರೋನಾ ಸೋಂಕು: ಬೆಂಗಳೂರಿನ ಚಂದನ ವಾಹಿನಿಯ ಸ್ಪಷ್ಟನೆಯೇನು?
ಕೇಂದ್ರ ಸರ್ಕಾರ ಸ್ವಾಮ್ಯದ ಬೆಂಗಳೂರಿನ ಡಿಡಿ ಚಂದನ ವಾಹಿನಿಯ ಉದ್ಯೋಗಿಯೊಬ್ಬರಿಗೆ ಕೋವಿಡ್ -19 ಸೋಂಕು ಹರಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಸಂದೇಶ ವಿಡಿಯೋ ಹರಿದಾಡುತ್ತಿದೆ. ಈ ಬಗ್ಗೆ ಉದ್ಯೋಗಿಗಳು ಹಾಗೂ ಡಿಡಿ ಚಂದನವಾಹಿನಿಯ ಬಳಗ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ಬೆಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ಬೆಂಗಳೂರಿನ ಡಿಡಿ ಚಂದನ ವಾಹಿನಿಯ ಉದ್ಯೋಗಿಯೊಬ್ಬರಿಗೆ ಕೋವಿಡ್ -19 ಸೋಂಕು ಹರಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಸಂದೇಶ ವಿಡಿಯೋ ಹರಿದಾಡುತ್ತಿದೆ. ಈ ಬಗ್ಗೆ ಉದ್ಯೋಗಿಗಳು ಹಾಗೂ ಡಿಡಿ ಚಂದನವಾಹಿನಿಯ ಬಳಗ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
ಕೋವಿಡ್ -19 ಸೋಂಕು ದೃಢಪಟ್ಟಿರುವ ನಮ್ಮ ಕ್ಯಾಮರಾ ಮ್ಯಾನ್ ಒಬ್ಬರು ತಮಿಳುನಾಡಿನಿಂದ ವಾಪಸ್ ಆಗಿ ಮೇ 10ರಿಂದ 25ರ ವರೆಗೆ ನಿರಂತರವಾಗಿ ಚಂದನ ವಾಹಿನಿಯಲ್ಲಿ ಕರ್ತವ್ಯ ನಿರ್ವಹಿಸಿರುವುದಾಗಿ ತಪ್ಪು ಮಾಹಿತಿ ಬಿತ್ತರಿಸಲಾಗಿದೆ. ಆದರೆ ಇದು ಸುಳ್ಳುಸುದ್ದಿ ಎಂದು ಟ್ವೀಟ್ ಮೂಲಕ ವಾಹಿನಿ ಸ್ಪಷ್ಟೀಕರಣ ನೀಡಿದೆ.
ದೇಶದ ಅಧಿಕೃತ ವಾಹಿನಿಯಾಗಿ ಗುರುತಿಸಿಕೊಂಡಿರುವ ದೂರದರ್ಶನದ ನಮ್ಮ ಸಿಬ್ಬಂದಿ ಸಂಕಷ್ಟ ಹಾಗೂ ಸವಾಲಿನ ಪರಿಸ್ಥಿತಿಯಲ್ಲೂ ವೈಯಕ್ತಿಕ ಅಪಾಯಗಳನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದೆ. ನಮ್ಮ ದೂರದರ್ಶನದ ಕ್ಯಾಮರಾಮನ್ ಅವರು ಚಂಡೀಗಢದಲ್ಲಿ ಕೆಲಸ ಮಾಡುತ್ತಿದರು. ಅವರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಂದನ ವಾಹಿನಿಯಲ್ಲಿ ಕರ್ತವ್ಯ ನಿರತರಾಗಿದ್ದರು.
ಮೊನ್ನೆ 27ರಂದು ಅವರಿಗೆ ಕೋವಿಡ್ -19 ಸೋಂಕು ತಗಲಿರುವುದು ದೃಢಪಟ್ಟಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ದೂರದರ್ಶನದ ಸಂಪೂರ್ಣ ಕುಟುಂಬ ಅವರು ತ್ವರಿತವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತಿದೆ.
ಈ ಕ್ಯಾಮರಾಮನ್ ಕಳೆದ ಮೇ 23ರಂದು ರಾತ್ರಿ 8 ಗಂಟೆಯಿಂದ 9.30 ಗಂಟೆವರೆಗೆ ಮಾತ್ರ ಕರ್ತವ್ಯ ನಿರ್ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


