ಎರಡು ರಾಜ್ಯಗಳ ಗಡಿಭಾಗದಲ್ಲಿದ್ದರೂ ಚಾಮರಾಜನಗರಕ್ಕೆ ಕೊರೋನಾಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ!
ಕೊರೋನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಗಡಿಜಿಲ್ಲೆ ಚಾಮರಾಜನಗರ ಮಾತ್ರ ಉಳಿದುಕೊಂಡು ರಾಜ್ಯದ ಕೊರೊನಾ ಮುಕ್ತ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಾಮರಾಜನಗರ: ಕೊರೋನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಗಡಿಜಿಲ್ಲೆ ಚಾಮರಾಜನಗರ ಮಾತ್ರ ಉಳಿದುಕೊಂಡು ರಾಜ್ಯದ ಕೊರೊನಾ ಮುಕ್ತ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊರೋನಾ ಸೋಂಕು ಇರುವ ತಮಿಳುನಾಡು, ಕೇರಳ ಮತ್ತು ನಮ್ಮ ರಾಜ್ಯದ ಮೈಸೂರು, ಮಂಡ್ಯ ಜಿಲ್ಲೆಯ ಗಡಿಗಳನ್ನು ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ ಕಳೆದ 60 ದಿನಗಳಲ್ಲಿ ಒಂದೂ ಪ್ರಕರಣ ದಾಖಲಾಗದೇ ಹಸಿರು ವಲಯದಲ್ಲೇ ಮುಂದುವರೆದು ರಾಜ್ಯಕ್ಕೆ ಮಾದರಿಯಾಗಿದೆ.
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ, ಅಧಿಕಾರಿ ವರ್ಗದ ಶ್ರಮ, ಜಿಲ್ಲೆಯ ಜನತೆಯ ಸಹಕಾರ ಹಸಿರು ವಲಯವಾಗಲು ಕಾರಣವಾಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಿಂದುಳಿದ ಜಿಲ್ಲೆ, ನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಗೆ ತುತ್ತಾಗಿದ್ದ ಗಡಿಜಿಲ್ಲೆ ಕೊರೊನಾ ವಿಚಾರದಲ್ಲಿ ಮಾದರಿ ಜಿಲ್ಲೆಯಾಗಿದೆ.
ಇಲ್ಲಿಯವರೆಗೆ ಕೊರೊನಾ ಕಾಣಿಸಿಕೊಳ್ಳದ ಜಿಲ್ಲೆಗಳಾಗಿ ರಾಮನಗರ ಹಾಗೂ ಚಾಮರಾಜನಗರ ಮಾತ್ರ ಇದ್ದವು. ಆದರೆ, ರಾಮನಗರಕ್ಕೆ ತಮಿಳುನಾಡಿನಿಂದ ಬಂದಿದ್ದ ಕುಟುಂಬದ ಒಂದು ಮಗುವಿಗೆ ಸೋಂಕು ದೃಢಪಟ್ಟಿದ್ದರಿಂದ ಕೊರೋನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಚಾಮರಾಜನಗರ ಹೊರಹೊಮ್ಮಿದೆ.
ವರದಿ: ಗುಳಿಪುರ ನಂದೀಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


