ಮತ್ತೆ ರಸ್ತೆಗಿಳಿದ ಬಿಎಂಟಿಸಿ ಬಸ್ ಗಳು: ಪಾಸ್ ಗಳಿಗೆ ಮಾತ್ರ ಅವಕಾಶ
ಲಾಕ್‌ಡೌನ್ ನಿರ್ಬಂಧಗಳು ಮತ್ತಷ್ಟು ಸರಾಗವಾಗುವುದರೊಂದಿಗೆ ಬಿಎಂಟಿಸಿ ಮಂಗಳವಾರದಿಂದ ತನ್ನ ಕಾರ್ಯಾಚರಣೆಯನ್ನು ಪುನರ್ ಆರಂಭಿಸಿದೆ. ಆದಾಗ್ಯೂ, ಇದು ಲಾಕ್ ಡೌನ್ ಮುಂಚಿನ ರೀತಿಯಲ್ಲಿ ಇಲ್ಲ, ಇದು ಹಣರಹಿತ ಹಾಗೂ ಟಿಕೆಟ್ ರಹಿತವಾಗಿದೆ.

ಬೆಂಗಳೂರು: ಲಾಕ್‌ಡೌನ್ ನಿರ್ಬಂಧಗಳು ಮತ್ತಷ್ಟು ಸರಾಗವಾಗುವುದರೊಂದಿಗೆ ಬಿಎಂಟಿಸಿ ಮಂಗಳವಾರದಿಂದ ತನ್ನ ಕಾರ್ಯಾಚರಣೆಯನ್ನು ಪುನರ್ ಆರಂಭಿಸಿದೆ. ಆದಾಗ್ಯೂ, ಇದು ಲಾಕ್ ಡೌನ್ ಮುಂಚಿನ ರೀತಿಯಲ್ಲಿ ಇಲ್ಲ, ಇದು ಹಣರಹಿತ ಹಾಗೂ ಟಿಕೆಟ್ ರಹಿತವಾಗಿದೆ.
ಬಿಎಂಟಿಸಿ ಬಸ್ ಗಳು ಹಗಲು ಹೊತ್ತಿನಲ್ಲಿ ಮಾತ್ರ ಸಂಚರಿಸಲಿದ್ದು, ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯಪಡಿಸಲಾಗಿದೆ. ಪಾಸ್ ಆಧಾರಿತ ವ್ಯವಸ್ಥೆಯೊಂದಿಗೆ ಬಸ್ ಗಳು ಸಂಚರಿಸಲಿದ್ದು, ದೈನಂದಿನ, ಸಾಪ್ತಾಹಿಕ ಹಾಗೂ ಮಾಸಿಕ ಪಾಸ್ ಹೊಂದಿರುವವರು ಮಾತ್ರ ಪ್ರಯಾಣಿಸಬಹುದಾಗಿದೆ.
ದೈನಂದಿನ ಪಾಸಿನ ಬೆಲೆ 70 ರೂ ಆಗಿದ್ದು, ವಾರದ ಪಾಸ್ ಬೆಲೆ 300 ರೂ. ಆಗಿರುತ್ತದೆ. ಇದನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ಬಿಎಂಟಿಸಿ ಡಿಪೋಗಳ ಟಿಕೆಟ್ ಕೌಂಟರ್ ಗಳ ಮೂಲಕ ವಾರದ ಹಾಗೂ ಮಾಸಿಕ ಬಸ್ ಪಾಸ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ದೈನಂದಿನ ಪಾಸ್ ಗಳನ್ನು ನಿರ್ವಾಹಕರಿಂದ ಪಡೆಯಬಹುದು. ರಿಯಾಯಿತಿ ಪಾಸ್ ಗಳಿಗೆ ಮಾನ್ಯತೆ ಹೊಂದಿದವರು ಪ್ರಯಾಣಿಸಬಹುದು ಎಂದು ಬಿಎಂಟಿಸಿ ಮ್ಯಾನೇಜಿಂಗ್ ಡೈರೆಕ್ಟರ್ ಸಿ. ಸಿಖಾ ತಿಳಿಸಿದ್ದಾರೆ.
15 ಡಿಪೋಗಳಲ್ಲಿ 75 ಬಸ್ ಗಳಿಗೆ ಹೊಸದಾಗಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಬಿಎಂಟಿಸಿ ಪರಿಚಯಿಸುತ್ತಿದೆ. ಇದರಲ್ಲಿ ಮೈ ಬಿಎಂಟಿಸಿ ಆಪ್ ಮೂಲಕ ಪಾಸ್ ಗಳನ್ನು ಖರೀದಿಸಬಹುದಾಗಿದೆ. ಇದು ಪ್ರಾಯೋಗಿಕವಾಗಿದೆ. ಸ್ಮಾರ್ಟ್ ಫೋನ್ ಹೊಂದಿರುವವರು ಈ ಪಾಸ್ ಗಳನ್ನು ಖರೀದಿಸಬಹುದಾಗಿದೆ. ಇಂತಹ ಪ್ರಯಾಣಿಕರ ಖಾತೆಗಳಿಂದ ಹಣವನ್ನು ನೇರವಾಗಿ
ಕಡಿತಗೊಳಿಸಲಾಗುವುದು ಎಂದು ಸಿಖಾ ವಿವರಿಸಿದ್ದಾರೆ.
ಲಾಕ್ ಡೌನ್ ಮುಂಚಿತವಾಗಿ 6, 100 ಬಸ್ ಗಳು ಕಾರ್ಯನಿರ್ವಹಿಸುತ್ತಿದ್ದವು.ಇಂದಿನಿಂದ ಕೇವಲ 2 ಸಾವಿರ ಬಸ್ ಗಳು ಸಂಚರಿಸಲಿವೆ. ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಬಸ್ ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು, ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೂ ಮಾತ್ರ ಈ ಬಸ್ ಗಳು ಸಂಚರಿಸಲಿವೆ. ಸಂಜೆ 7 ಗಂಟೆಯ ಒಳಗೆ ಕಡ್ಡಾಯವಾಗಿ ಡಿಪೋಗಳಿಗೆ ಬಸ್ ಗಳು ಸೇರಬೇಕು ಎಂದು ಶಿಖಾ ತಿಳಿಸಿದರು.
50 ಆಸನಗಳ ಸಾಮರ್ಥ್ಯದ ಬಿಎಂಟಿಸಿ ಬಸ್ ನಲ್ಲಿ ಕೇವಲ 40 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆಸನಗಳ ವ್ಯವಸ್ಥೆಗಾಗಿ ಕಂಡಕ್ಟರ್‌ಗಳು ಕರೆಯಬಹುದು. ಆದಾಗ್ಯೂ, ಮೂರು ಪ್ರಯಾಣಿಕರ ಆಸನದಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


