ಪಂಚಾಯಿತಿಗಳಿಗೆ ಆಡಳಿತ ಸಮಿತಿ, ಸಂವಿಧಾನ ಆಶಯಕ್ಕೆ ಕೊಡಲಿಪೆಟ್ಟು: ಮಲ್ಲಿಕಾರ್ಜುನ ಖರ್ಗೆ
ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿರುವ ಪಂಚಾಯತ್‌ಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸುವ ರಾಜ್ಯ ಸರ್ಕಾರದ ನಿರ್ಧಾರ ಸಂವಿಧಾನ, ಪಂಚಾಯತ್ ಸಂಸ್ಥೆಗಳ ಆಶಯಕ್ಕೆ ಮರಣ ಗಂಟೆ, ಕೊಡಲಿಪೆಟ್ಟು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಬಲವಾಗಿ ಖಂಡಿದ್ದಾರೆ.

ಬೆಂಗಳೂರು: ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿರುವ ಪಂಚಾಯತ್‌ಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸುವ ರಾಜ್ಯ ಸರ್ಕಾರದ ನಿರ್ಧಾರ ಸಂವಿಧಾನ, ಪಂಚಾಯತ್ ಸಂಸ್ಥೆಗಳ ಆಶಯಕ್ಕೆ ಮರಣ ಗಂಟೆ, ಕೊಡಲಿಪೆಟ್ಟು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಬಲವಾಗಿ ಖಂಡಿದ್ದಾರೆ.
ಈ ತೀರ್ಮಾನ ಸಂವಿಧಾನ ಮತ್ತು ಪಂಚಾಯತ್ ರಾಜ್ ಆಶಯಗಳಿಗೆ ಕೊಡಲಿಪೆಟ್ಟು ನೀಡಿದಂತಾಗಲಿದ್ದು ಇದನ್ನು ಕೂಡ ಲೇ ಕೈಬಿಡಬೇಕು ಎಂದೂ ಒತ್ತಾಯ ಮಾಡಿದ್ದಾರೆ.
ಯುಎನ್‌ಐ ಜೊತೆ ಮಾತನಾಡಿದ ಅವರು, ಆಡಳಿತ ಸಮಿತಿಗಳನ್ನು ನೇಮಿಸುವ ಮೂಲಕ ಪಕ್ಷಾತೀತವಾಗಿ ಚುನಾಯಿತರಾದ ಪಂಚಾಯತ್ ಸಂಸ್ಥೆಗಳ ಕತ್ತು ಹಿಸಲು ಸರ್ಕರ ಹೊರಟಿರುವುದು ಈ ಸಂಸ್ಥೆಗಳ ಮೂಲ ಉದ್ದೇಶ ಆಶಯಗಳಿಗೆ ಕೊಡಲಿಪೆಟ್ಟು ನೀಡಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.
ಆಡಳಿತ ಸಮಿತಿಗಳನ್ನು ನೇಮಿಸುವ ನಿರ್ಧಾರದಿಂದ ಸರ್ಕಾರ ದೂರವಿರಬೇಕು ಎಂಉ ಒತ್ತಾಯ ಮಾಡಿದ ಅವರು, ಪಂಚಾಯತ್‌ಗಳ ಚುನಾಯಿತ ಸಂಸ್ಥೆಗಳ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
"ಪಂಚಾಯಿತಿಗಳ ಚುನಾಯಿತ ಸಂಸ್ಥೆಗಳ ಅವಧಿಯನ್ನು ವಿಸ್ತರಣೆ ಮಾಡಿದ ಹಲವು ನಿದರ್ಶನಗಳಿವೆ ಎಂದು ಅವರು ತಿರುಗೇಟು ನೀಡಿದರು.
ರಾಜಕೀಯೇತರ ಆಧಾರದ ಮೇಲೆ ಮತ್ತು ರಾಜಕೀಯೇತರ ಪಕ್ಷದ ಚಿಹ್ನೆಗಳ ಮೇಲೆ 2015 ರಲ್ಲಿ ಪಂಚಾಯತ್ ಸಂಸ್ಥೆಗಳಿಗೆ ಚುನಾವಣೆ ನಡೆದಿರುವುದನ್ನು ನೆನಪು ಮಾಡಿಕೊಟ್ಟ ಅವರು ಆಡಳಿತ ಸಮಿತಿಗಳನ್ನು ನೇಮಿಸುವ ಮೂಲಕ, ಬಿಜೆಪಿ ಸರ್ಕಾರವು ತಮ್ಮ ಪಕ್ಷದ ಸದಸ್ಯರನ್ನು ಸೇರಿಸಿಕೊಳ್ಳುವ ಮೂಲಕ ರಾಜಕೀಯ ಬಣ್ಣ ನೀಡಲು ಹೊರಟಿದೆ ಎಂದು ದೂರಿದರು.
"ರಾಜ್ಯಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತುಗಳ ಖಾಲಿ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತಿರುವ ರಾಜ್ಯ ಸರ್ಕಾರವು ಇನ್ನೊಂದು ಕಡೆ ಪಂಚಾಯತ್‌ಗಳ ಚುನಾವಣೆಯನ್ನು ಮುಂದೂಡಲು ಹೊರಟಿರುವುದು ನಿಜಕ್ಕೂ ಹಾಸ್ಯಸ್ಪದ, ಇಬ್ಬಂದಿ ದೋರಣೆಯಾಗಿದೆ ಎಂದರು.
ಆಡಳಿತ ಸಮಿತಿಗಳ ನೇಮಕಕ್ಕೆ ಸಂಬಂಧಿಸಿದ ನಿರ್ಧಾರದ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ಹುನ್ನಾರ, ಒಳಸಂಚು ಇದೆ ಈ ಕ್ರಮವನ್ನು ಕಾಂಗ್ರೆಸ್ ವಿರೋಧಿಸಲಿದೆ ಎಂದರು.
ಆಡಳಿತ ಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡುವಾಗ ರಾಜ್ಯ ಸರ್ಕಾರವು ರೋಸ್ಟರ್ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಿಲ್ಲ , “ತುಳಿತಕ್ಕೊಳಗಾದ ಸಮುದಾಯಗಳಿಗೆ ಸೇರಿದ ಮಹಿಳೆಯರು ಮತ್ತು ವ್ಯಕ್ತಿಗಳು ಸ್ಥಾನಗಳಿಂದ ಆಯ್ಕೆಯಾದ ಹಲವು ಉದಾಹರಣೆಗಳಿವೆ, ಇವುಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಅನ್ಯಾಯ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
"ರಾಜ್ಯ ಸರ್ಕಾರದ ನಿರ್ಧಾರ ಮಹಿಳಾ ವಿರೋಧಿ ಮತ್ತು ತುಳಿತಕ್ಕೊಳಗಾದ ಸಮುದಾಯದ ವಿರೋಧಿ ನೀತಿಯಾಗಿದೆ. ಅವಧಿ ಮುಗಿಯುತ್ತಿರುವ ಪಂಚಾಯತ್ ಗಳಿಗೆ ಆಡಳಿತ ಸಮಿತಿಗಳನ್ನು ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸದ್ಯ , 6000 ಕ್ಕೂ ಹೆಚ್ಚು ಪಂಚಾಯತ್ ಗಳ ಐದು ವರ್ಷಗಳ ಅವಧಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


