ರಾಜ್ಯ

ನಾಲ್ವರು ಕುರಿಗಳ್ಳರನ್ನು ಹಿಡಿದು ಪೊಲೀಸರಿಗೆ ‌ಒಪ್ಪಿಸಿದ ಸ್ಥಳೀಯರು

ಕುರಿಗಳನ್ನು ಕಳ್ಳತನ ಮಾಡಲು ಹೊಂಚುಹಾಕಿದ್ದ ನಾಲ್ವರ ಯುವಕರನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.

ನಾಲ್ವರು ಕುರಿಗಳ್ಳರನ್ನು ಹಿಡಿದು ಪೊಲೀಸರಿಗೆ ‌ಒಪ್ಪಿಸಿದ ಸ್ಥಳೀಯರು
ಸಾಂದರ್ಭಿಕ ಚಿತ್ರ
Published On :

ಗದಗ: ಕುರಿಗಳನ್ನು ಕಳ್ಳತನ ಮಾಡಲು ಹೊಂಚುಹಾಕಿದ್ದ ನಾಲ್ವರ ಯುವಕರನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.

ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ ರನ್ನು ಸ್ಥಳೀಯರು ಅರೆಬೆತ್ತಲೆಗೊಳಿಸಿ ಥಳಿಸಿ, ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಗದಗನ ಸೆಟಲ್ಮೆಂಟ್ ನಿವಾಸಿಗಳಾದ ಶ್ರೀಕಾಂತ್, ವಿಕಾಸ್ ಸೇರಿ ನಾಲ್ವರು ಬಂಧಿತ ಕಳ್ಳರು. ಈ ಖದೀಮರು ಗದಗನ ಸೆಟಲ್ಮೆಂಟ್  ನಿವಾಸಿಗಳು ಎನ್ನಲಾಗುತ್ತಿದ್ದು, ಈ ಕೃತ್ಯಕ್ಕೆ ಅಣ್ಣಿಗೇರಿ ಕುರಿಕಾಯುವ ಓರ್ವ ಬಾಲಕನನ್ನು ಬಳಸಿಕೊಂಡಿದ್ದರು. ಇಬ್ಬರು ಬಾಲಕರು ಸೇರಿದಂತೆ ಒಟ್ಟು ನಾಲ್ಕು ಜನ ಕಳ್ಳರ ಗ್ಯಾಂಗ್ ಅನೇಕ ದಿನಗಳಿಂದ ಅಸುಂಡಿ, ಮಲ್ಲಸಮುದ್ರ, ಬಿಂಕದಕಟ್ಟಿ, ಕುರ್ತಕೋಟಿ ಹೀಗೆ ಅನೇಕ ಕಡೆಗಳಲ್ಲಿ  ಕುರಿಗಳನ್ನು ಕಳ್ಳತನ ಮಾಡುತ್ತಿದ್ದರು.

ಕಳ್ಳತನ ಮಾಡಿದ ಕುರಿಗಳನ್ನು ಗದಗದಿಂದ ಹೊರರಾಜ್ಯದ ಕೊಲ್ಲಾಪುರ ಹಾಗೂ ಸೊಲ್ಲಾಪುರಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಇವರ ಚಲನ-ವಲನ ಅನುಮಾನಗೊಂಡ ಕುರಿಗಾಹಿಗಳು, ಮರದ ಮೇಲೆ ಏರಿ ಕುಳಿತು ಖದೀಮರು ಕುರಿಗಳನ್ನು ಕದಿಯುವುದನ್ನು  ನೋಡಿದ್ದಾರೆ. ಬಳಿಕ ಕಳ್ಳರನ್ನು ಹಿಡಿದು ಥಳಿಸಿ, ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಕರೆ ತಂದು ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.