ರಾಜ್ಯ

ಬೆಂಗಳೂರು: ತನಗಿಂತ ಜಾಸ್ತಿ ಕುಡಿದಾ ಅಂತಾ ಸ್ನೇಹಿತನ ತಲೆಯನ್ನು ಗೋಡೆಗೆ ಗುದ್ದಿ ಭೀಕರ ಕೊಲೆ!

ಕುಡುಕರ ಮಧ್ಯೆ ಮದ್ಯ ಸೇವಿಸುವ ವಿಷಯದಲ್ಲಿ ಉಂಟಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೋವಿ ಕಾಲೋನಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಬೆಂಗಳೂರು: ತನಗಿಂತ ಜಾಸ್ತಿ ಕುಡಿದಾ ಅಂತಾ ಸ್ನೇಹಿತನ ತಲೆಯನ್ನು ಗೋಡೆಗೆ ಗುದ್ದಿ ಭೀಕರ ಕೊಲೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಕುಡುಕರ ಮಧ್ಯೆ ಮದ್ಯ ಸೇವಿಸುವ ವಿಷಯದಲ್ಲಿ ಉಂಟಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೋವಿ ಕಾಲೋನಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಸ್ನೇಹಿತರ ಮಧ್ಯೆ ಹೆಚ್ಚು ಯಾರೂ ಮದ್ಯ ಸೇವಿಸಿದ್ದಾರೆ ಎನ್ನುವ ಕಾರಣಕ್ಕೆ ಜಗಳ ಉಂಟಾಗಿದೆ. ಆಕ್ರೋಶ ಗೊಂಡ ವ್ಯಕ್ತಿಯೊಬ್ಬ ಸ್ನೇಹಿತನ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾನೆ. 

ಬೋವಿ ಕಾಲೋನಿಯ ರಾಜು ಅಲಿಯಾಸ್ ರಾಜೇಶ್ (40) ಕೊಲೆಯಾದ ವ್ಯಕ್ತಿ. ಹತ್ಯೆ ಮಾಡಿ ಪರಾರಿಯಾಗಿರುವ ನೇತ ಎಂಬಾತ ಪರಾರಿಯಾಗಿದ್ದಾನೆ.

ಕೊಲೆಯಾದ ರಾಜು ಹಾಗೂ ಕೃತ್ಯ ವೆಸಗಿದ ನೇತ ಜೊತೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಹಲವು ವರ್ಷಗಳ ಸ್ನೇಹಿತರಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಇಬ್ಬರು ಜೊತೆಯಲ್ಲಿ ಮದ್ಯ ಸೇವಿಸುತ್ತಿದ್ದರು. ರಾತ್ರಿ ಇಬ್ಬರು ಮದ್ಯ ಸೇವಿಸುವಾಗ ಹೆಚ್ಚು ಮದ್ಯ ಕುಡಿದ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. 

ಜಗಳ ವಿಕೋಪಕ್ಕೆ ತಿರುಗಿದಾಗ ರಾಜು ತಲೆ ಯನ್ನು ಗೋಡೆಗೆ ಗುದ್ದಿ ನೇತ ಪರಾರಿಯಾಗಿದ್ದು ಗಂಭೀರ ವಾಗಿ ಗಾಯಗೊಂಡ ರಾಜು ಅವರನ್ನು ಆಸ್ಪತ್ರೆ ಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು.

ಪ್ರಕರಣ ದಾಖಲಿಸಿ ಕೊಂಡಿರುವ ರಾಮಮೂರ್ತಿ ನಗರ ಪೊಲೀಸರು ಪರಾರಿಯಾಗಿರುವ ಆರೋಪಿ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.