ಬೇಗೂರು ಠಾಣೆಯ ಪೊಲೀಸ್ ಪೇದೆಯ ಕೊರೋನಾ ಪ್ರಕರಣಕ್ಕೆ ಟ್ವಿಸ್ಟ್; ವೈದ್ಯಕೀಯ ವರದಿ ಅದಲು ಬದಲು?
ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆಯ ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ಬೆಂಗಳೂರಿನ ಬೇಗೂರು ಠಾಣೆಯ ಪೊಲೀಸ್ ಪೇದೆಯ ಕೊರೋನಾ ಪರೀಕ್ಷಾ ವರದಿ ಅದಲು ಬದಲಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಮಾರಕ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆಯ ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ಬೆಂಗಳೂರಿನ ಬೇಗೂರು ಠಾಣೆಯ ಪೊಲೀಸ್ ಪೇದೆಯ ಕೊರೋನಾ ಪರೀಕ್ಷಾ ವರದಿ ಅದಲು ಬದಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಬೇಗೂರು ಪೊಲೀಸ್ ಠಾಣೆಯ ಪೇದೆಯ ಕೊರೋನಾ ವೈರಸ್ ಪರೀಕ್ಷೆಯ ವರದಿ ಅದಲು ಬದಲಾಗಿದ್ದು, ಹೀಗಾಗಿ ಪಾಸಿಟಿವ್ ಬಂದಿದ್ದ ವರದಿ ನೆಗೆಟಿವ್ ಆಗಿತ್ತು ಎಂದು ಹೇಳಲಾಗಿದೆ. ಒಂದೇ ಆಸ್ಪತ್ರೆಯಲ್ಲಿ, ಒಂದೇ ಹೆಸರಿನ ಇಬ್ಬರಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಆದರೆ ಕೊರೋನಾ ಸೋಂಕು ಇದಿದ್ದು ಒಬ್ಬರಿಗೆ ಆದರೆ ರಿಪೋರ್ಟ್ ಬಂದಿದ್ದು ಮತ್ತೊಬ್ಬರಿಗೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮೇ 1ರಂದು ಬೇಗೂರು ಠಾಣೆ ಪೊಲೀಸ್ ಪೇದೆಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಅದೇ ದಿನ ಸುಮಾರು 700ಕ್ಕೂ ಹೆಚ್ಚು ಮಂದಿಗೆ ಗಂಟಲು ದ್ರವ ಪರೀಕ್ಷೆ ಮಾಡಿದ್ದಾರೆ. 700 ಮಂದಿಯಲ್ಲಿ ಇಬ್ಬರು ರೋಗಿಗಳ ಹೆಸರು ಒಂದೇ ಆಗಿತ್ತು ಎನ್ನಲಾಗಿದೆ. ಪೊಲೀಸ್ ಪೇದೆ ಕೊವಿಡ್ ಟೆಸ್ಟ್ ಕ್ರಮ ಸಂಖ್ಯೆ 9601, ಕೊರೋನಾ ಪಾಸಿಟಿವ್ ಬಂದ ಕ್ರಮ ಸಂಖ್ಯೆ 10396 ಆಗಿದೆ. ಬೇಗೂರು ಠಾಣೆಗೆ ಆರೋಗ್ಯ ಇಲಾಖೆ ಕಳಿಸಿದ ಕೊವಿಡ್-19 ವರದಿಯಲ್ಲಿ ಪ್ರಕರಣ ಬಯಲಾಗಿದೆ. ಆ ಮೂಲಕ ಬೇಗೂರು ಠಾಣೆಯಲ್ಲಿ ಯಾರಿಗೂ ಕೊರೊನಾ ಇಲ್ಲ ಎಂಬುವುದು ಸಾಬೀತಾಗಿದೆ.
ಸದ್ಯ ಆಸ್ಪತ್ರೆಗೆ ದಾಖಲಾಗಿದ್ದ ಪೇದೆಗೆ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಈ ವೇಳೆ ವರದಿ ನೆಗೆಟಿವ್ ಬಂದಿದೆ. ಜೊತೆಗೆ ಪೇದೆಯ 12 ಜನ ಕುಟುಂಬಸ್ಥರಿಗೂ ನೆಗೆಟಿವ್ ಬಂದಿದೆ. ಪೇದೆ ಸಂಪರ್ಕದಲ್ಲಿದ್ದ ಪೊಲೀಸರಿಗೆ ಆರೋಗ್ಯ ತಪಾಸಣೆ ಮಾಡಿದ್ದು, ಇಂದು ಸಂಜೆ ಪೊಲೀಸರ ಕೊವಿಡ್ 19 ರಿಸಲ್ಟ್ ಬರಲಿದೆ ಎನ್ನಲಾಗಿದೆ.
ಇನ್ನು ಪಾಸಿಟಿವ್ ಬಂದ ವ್ಯಕ್ತಿ ವಿಳಾಸ ಇನ್ನೂ ಪತ್ತೆಯಾಗಿಲ್ಲ. ಕೊರೊನಾ ಸೋಂಕಿರುವ ವ್ಯಕ್ತಿಯ ಫೋನ್ ಕನೆಕ್ಟ್ ಆಗಿಲ್ಲ. ಅಸಲಿ ಕೊರೊನಾ ಸೋಂಕಿತ ವ್ಯಕ್ತಿ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ಆತ ಯಾರೆಂದು ಪತ್ತೆಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


