ರಾಜ್ಯ

ಶವಯಾತ್ರೆಯಲ್ಲಿ ಸಖತ್ ಸ್ಟೆಪ್ಸ್ ಹಾಕಿ ಕುಣಿದಾಡಿದ ಖಾಕಿ

ಶವಯಾತ್ರೆಯ ಸಂದರ್ಭದಲ್ಲಿ ಬಂಧುಗಳು, ಬೀಗರು ಮೃತ ವ್ಯಕ್ತಿಯ ಕಳೇಬರ ಕಳಿಸಿಕೊಡುವಾಗ ಕಣ್ತುಂಬಾ ನೀರು ತಂದುಕೊಂಡು ಅಳುತ್ತಲೆ ಮಸಣದತ್ತ ಭಾರವಾದ ಹೆಜ್ಜೆ ಹಾಕುತ್ತಾರೆ. ಆದರೆ ಇಲ್ಲೊಂದಿಷ್ಟು ಜನ ಶವಯಾತ್ರೆ ಸಂದರ್ಭದಲ್ಲಿ ಸಖತ್ ಸಟೆಪ್ ಹಾಕಿ ಕುಣಿದಾಡಿದ್ದಾರೆ.

ಶವಯಾತ್ರೆಯಲ್ಲಿ ಸಖತ್ ಸ್ಟೆಪ್ಸ್ ಹಾಕಿ ಕುಣಿದಾಡಿದ ಖಾಕಿ
ಶವಯಾತ್ರೆ ವೇಳೆ ಡ್ಯಾನ್ಸ್ ಮಾಡುತ್ತಿರುವ ಪೊಲೀಸರು
Published On :

ಗಂಗಾವತಿ: ಶವಯಾತ್ರೆಯ ಸಂದರ್ಭದಲ್ಲಿ ಬಂಧುಗಳು, ಬೀಗರು ಮೃತ ವ್ಯಕ್ತಿಯ ಕಳೇಬರ ಕಳಿಸಿಕೊಡುವಾಗ ಕಣ್ತುಂಬಾ ನೀರು ತಂದುಕೊಂಡು ಅಳುತ್ತಲೆ ಮಸಣದತ್ತ ಭಾರವಾದ ಹೆಜ್ಜೆ ಹಾಕುತ್ತಾರೆ. ಆದರೆ ಇಲ್ಲೊಂದಿಷ್ಟು ಜನ ಶವಯಾತ್ರೆ ಸಂದರ್ಭದಲ್ಲಿ ಸಖತ್ ಸಟೆಪ್ ಹಾಕಿ ಕುಣಿದಾಡಿದ್ದಾರೆ. 

ಎಲ್ಲಿ ಅಂತಿರಾ ಇಲ್ಲಿ ನೋಡಿ. ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪೊಲೀಸ್ ಠಾಣೆಯ ಪೊಲೀಸರು ಶುಕ್ರವಾರ ಶವಯಾತ್ರೆ ನಡೆಸಿದರು. ಆದರೆ ಯಾರೊಬ್ಬ ಮುಖದಲ್ಲಿ ಒಂದಿನಿತು ಕಣ್ಣಿರ ಹನಿಯಾಗಲಿ, ದುಖಃದ ಛಾಯಾಗಲಿ ಕಂಡು ಬರಲಿಲ್ಲ. 

ಬದಲಿಗೆ ಶವಯಾತ್ರೆ ಸಂದರ್ಭದಲ್ಲಿ ಭರ್ಜರಿ ಮ್ಯೂಸಿಕ್ ಹಾಕಿ, ಸಖತ್ ಸ್ಟೆಪ್ಸ್ ಹಾಕಿ ಸಾರ್ವಜನ ಗಮನ ಸೆಳೆದರು. ಕೇವಲ ಗಮನ ಮಾತ್ರವಲ್ಲ, ಜನರಲ್ಲಿ ಅಚ್ಚರಿಗೆ ಕಾರಣವಾದರೂ. ಇಷ್ಟಕ್ಕೂ ತಾವರಗೆರಾ ಪಿಎಸ್ಐ ಗೀತಾಂಜಲಿ ನೇತೃತ್ವದಲ್ಲಿ ನಡೆದಿದ್ದು ಈ ಶವಯಾತ್ರೆ ವೀಶೇಷ ವಾಗಿತ್ತು. 

ಕೊರೊನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಈ ಅಣಕು ಶವಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಜನ ಕೊರೊನಾದ ಲಾಕ್ಡೌನ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಚ್ಚರಿಕೆ ಉಲ್ಲಂಘಿಸಿದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೋದರೆ ಏನಾಗುತ್ತದೆ ಎಂಬುವುದನ್ನು ಶವಯಾತ್ರೆ ಮೂಲಕ ತೋರಿಸಿಕೊಟ್ಟರು. 

ಪಟ್ಟಣದ ಪೊಲೀಸ್ ಠಾಣೆಯಿಂದ ಆರಂಭವಾದ ಶವಯಾತ್ರೆ, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿತ್ತು. ಈ ಸಂದರ್ಭದಲ್ಲಿ ನಾನಾ ಸಂಗೀತ ಗೀತೆಗಳಿಗೆ ಯುನಿಫಾರಂ ತೊಟ್ಟಿದ್ದ ಪೊಲೀಸರು ಸಖತ್ ಸ್ಟೆಪ್ಸ್ ಹಾಕಿ ಗಮನ ಸೆಳೆದರು. 

ವರದಿ ಶ್ರೀನಿವಾಸ ಎಂ.ಜೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.