ಹೊಸಪೇಟೆ: ಮಾಜಿ ಶಾಸಕ ಹೃದಯಘಾತದಿಂದ ಸಾವು!
ವಿಜಯನಗರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ರತನ್ ಸಿಂಗ್ ಇಂದು ಸಂಜೆ ಹೃದಯಘಾದಿಂದ ಸಾವನ್ನಪ್ಪಿದ್ದಾರೆ.

ಹೊಸಪೇಟೆ: ವಿಜಯನಗರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ರತನ್ ಸಿಂಗ್ ಇಂದು ಸಂಜೆ ಹೃದಯಘಾದಿಂದ ಸಾವನ್ನಪ್ಪಿದ್ದಾರೆ.
62 ವರ್ಷ ವಯಸ್ಸಿನ ರತನ್ ಸಿಂಗ್ ತಮ್ಮ ನಿವಾಸದಲ್ಲಿದ್ದ ಸಂದರ್ಭದಲ್ಲಿ ಏಕಾ ಏಕಿ ಎದೆ ನೋವು ಕಾಣಿಸಿಕೊಂಡ ಪರಿಣಾಮ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಬದುಕುಳಿಯಲಿಲ್ಲ.
ಆನಂದ್ ಸಿಂಗ್ ಸಹೋದರ ಸಂಬಂಧಿಯಾಗಿರುವ ರತನ್ ಸಿಂಗ್ 1991ರಲ್ಲಿ ಗುಜ್ಜಲ್ ಹನುಂಮತಪ್ಪನವರ ಅಕಾಲಿಕ ಮರಣದಿಂದ ತೆರವಾದ ಹೊಸಪೇಟೆ ವಿಜಯನಗರ ವಿದಾನಸಭ ಕ್ಷೇತ್ರದಲ್ಲಿ ನಡೆದ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ಶಂಕರಗೌಡರ ವಿರುದ್ದ ಸ್ಪರ್ಧಿಸಿ 431ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಉಳಿದ ಮೂರು ವರ್ಷಗಳ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದರು.
ಇನ್ನು ನಾಳೆ ಸಂಜೆ ಹೊಸಪೇಟೆ ನಗರದ ರಾಣಿ ಪೇಟೆಯ ತಮ್ಮ ನಿವಾಸದ ಬಳಿ ಅಂತ್ಯ ಸಂಸ್ಕಾರ ನೆರವೇರಲಿದೆ. ರಾಜ್ಯದಲ್ಲಿ ಕೊರೋನ ಭೀತಿಯಿಂದ ಸೆಕ್ಷನ್ 144 ಜಾರಿಯಲ್ಲಿದ್ದು, ಮೃತರ ಕಳೆ ಬರಹವನ್ನ ವೀಕ್ಷಣೆಮಾಡಲು ತಂಡ ತಂಡವಾಗಿ ಜನ ಸಾಮಾನ್ಯರು ಅವರ ಮನೆಗೆ ದಾವಿಸುತಿದ್ದಾರೆ.
ಇನ್ನು ಪರಿಸ್ಥಿತಿಯನ್ನ ನಿಭಾಹಿಸುವುದು ಪೊಲಿಸರಿಗೆ ನುಂಗಲಾರದ ತುತ್ತಾಗಿದ್ದು, ಮೃತರ ನೋಡವುದಕ್ಕೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಹಾಕಿ ಕೊಂಡು ಒಬ್ಬೊಬ್ಬರಾಗಿ ಬರುವಂತೆ ವಿನಂತಿಸಿಕೊಳ್ಳುತಿದ್ದಾರೆ. ಹೀಗಾದ್ರು ಲೆಕ್ಕಿಸದೆ ಕೆಲವರು ಮಾಸ್ಕ್ ದರಿಸದೆ ತಾತ್ಸಾರಮಾಡಿ ಪ್ರವೇಶ ಮಾಡುತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


