ರಾಜ್ಯ

ಇಟಲಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಚಿವ ಆನಂದ್ ಸಿಂಗ್ ಪುತ್ರಿ ವಾಪಸ್: ಬೆಂಗಳೂರಿನಲ್ಲಿ ಗೃಹಬಂಧನ

ಕೊರೋನಾ ವೈರಸ್ ಸೋಂಕು ಭೀತಿಯಿಂದ ಇಟಲಿಯ ರೋಮ್ ನಲ್ಲಿ ಸಿಲುಕಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಪುತ್ರಿ ನಗರಕ್ಕೆ ವಾಪಸಾಗಿದ್ದಾರೆ.

ಇಟಲಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಚಿವ ಆನಂದ್ ಸಿಂಗ್ ಪುತ್ರಿ ವಾಪಸ್: ಬೆಂಗಳೂರಿನಲ್ಲಿ ಗೃಹಬಂಧನ
ಆನಂದ್ ಸಿಂಗ್
Published On :

ಬೆಂಗಳೂರು: ಕೊರೋನಾ ವೈರಸ್ ಸೋಂಕು ಭೀತಿಯಿಂದ ಇಟಲಿಯ ರೋಮ್ ನಲ್ಲಿ ಸಿಲುಕಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಅವರ ಪುತ್ರಿ ನಗರಕ್ಕೆ ವಾಪಸಾಗಿದ್ದಾರೆ. 

ಬುಧವಾರ ಬೆಳಿಗ್ಗೆ ವಾಪಸಾಗಿದ್ದು, ಸೋಂಕು ಇಲ್ಲದಿದ್ದರೂ ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಆಕೆಯನ್ನು ಮನೆಯ ಪ್ರತ್ಯೇಕ ಕೊಠಡಿಯಲ್ಲಿ  ಇರಿಸಲಾಗಿದೆ. 14 ದಿನಗಳ ಕಾಲ ನಿಗಾವಹಿಸಲಾಗುತ್ತದೆ. 

ಪುತ್ರಿ ಯಾರ ಜೊತೆಗೂ ಸಂಪರ್ಕ ಹೊಂದುವಂತಿಲ್ಲ. ಪ್ರತ್ಯೇಕ ಕೊಠಡಿ, ಪ್ರತ್ಯೇಕ ತಟ್ಟೆ-ಲೋಟ, ಪ್ರತ್ಯೇಕ ಟಾಯ್ಲೆಟ್ ಬಳಸಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ಕೂಡ ಪ್ರತಿನಿತ್ಯ ಎರಡು ಬಾರಿ ಕರೆ ಮಾಡುತ್ತಾರೆ. ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿರುತ್ತಾರೆ. ಸ್ವಲ್ಪ ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಕಂಡು ಬಂದರೆ ಕೂಡಲೇ ಮಾಹಿತಿ ನೀಡಬೇಕೆಂದು ಸೂಚನೆ ನೀಡಲಾಗಿದೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್ ಅವರು, ನನ್ನ ಮಗಳು ರೋಮ್ ನಲ್ಲಿ ಪ್ರತ್ಯೇಕ ಹೋಟೆಲ್ ನಲ್ಲಿ ಇದ್ದಳು. ಹಾಗಾಗಿ ಒಬ್ಬಳೇ ವಾಪಸ್ ಆಗಿದ್ದಾಳೆ. ಮನೆಯಲ್ಲಿ ಐಸೋಲೇಷನ್ ನಲ್ಲಿ ಇಡಲಾಗಿದೆ. ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾರೆ. ಆರೋಗ್ಯ ಇಲಾಖೆಯ ನಿರ್ದೇಶನ ಪಾಲಿಸಲಾಗಿದೆ. ಈಗಾಗಲೇ ಇಟಲಿಯಲ್ಲಿ ಸ್ಯಾಂಪಲ್ ಗಳನ್ನು ನೀಡಲಾಗಿತ್ತು. ಆ ವಿವರವನ್ನೂ ಆರೋಗ್ಯ ಇಲಾಖೆಗೆ ನೀಡಲಾಗಿದೆ. ಆಕೆಯನ್ನು ಪ್ರತ್ಯೇಕವಾಗಿಡಲು ವ್ಯವಸ್ಥೆ ಮಾಡಲಾಗಿದೆ. ನಾನು ಕೂಡ ಆಕೆಯ ಭೇಟಿ ಮಾಡಿಲ್ಲ. ದೂರವಾಣಿ ಮೂಲಕ ಮಾತುಕತೆ ನಡಸಿದ್ದೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.