ರಾಜ್ಯ

ಬೆಂಗಳೂರು: ಹಣಕ್ಕಾಗಿ ಗಂಡನೊಂದಿಗೆ ಸೇರಿ ತಾಯಿಯನ್ನೇ ಕೊಂದ ಪುತ್ರಿ

ಗಂಡನೊಂದಿಗೆ ಸೇರಿ ಪತ್ನಿಯೊಬ್ಬಳು ಹಣಕ್ಕಾಗಿ ತನ್ನ ತಾಯಿಯಲ್ಲೇ ಹತ್ಯೆಗೈದು ಸ್ವಾಭಾವಿಕ ಮರಣವೆಂಬಂತೆ ಸಾಬೀತುಪಡಿಸಿಲು ಯತ್ನಿಸಿ ಸಿಕ್ಕಿ ಬಿದ್ದ ಘಟನೆ ವೈಯಾಲಿಕಾವಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು: ಹಣಕ್ಕಾಗಿ ಗಂಡನೊಂದಿಗೆ ಸೇರಿ ತಾಯಿಯನ್ನೇ ಕೊಂದ ಪುತ್ರಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ಗಂಡನೊಂದಿಗೆ ಸೇರಿ ಪತ್ನಿಯೊಬ್ಬಳು ಹಣಕ್ಕಾಗಿ ತನ್ನ ತಾಯಿಯಲ್ಲೇ ಹತ್ಯೆಗೈದು ಸ್ವಾಭಾವಿಕ ಮರಣವೆಂಬಂತೆ ಸಾಬೀತುಪಡಿಸಿಲು ಯತ್ನಿಸಿ ಸಿಕ್ಕಿ ಬಿದ್ದ ಘಟನೆ ವೈಯಾಲಿಕಾವಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವೈಯಾಲಿಕಾವಲ್ ನಿವಾಸಿ ಅನುಸೂಯಾ ಕೊಲೆಯಾದ ತಾಯಿ. ಅವರನ್ನು ಹತ್ಯೆ ಮಾಡಿದ ಆರೋಪಿಗಳಾದ ಪುತ್ರಿ ವೇಣಿ ಹಾಗೂ ಅಳಿಯ ರಾಜು ಎಂಬವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಅನುಸೂಯಾ ಅವರ ಮನೆಗೆ ಫೆಬ್ರವರಿ ತಿಂಗಳಲ್ಲಿ ಮನೆಗೆ ಮಗಳು ವೇಣಿ ಮತ್ತು ಆಕೆಯ ಗಂಡ ರಾಜು ಬಂದಿದ್ದಾರೆ, ಈ ವೇಳೆ ಹಣಕ್ಕಾಗಿ ಅವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ವೇಣಿ ಮತ್ತು ಆಕೆಯ ಗಂಡ ರಾಜು ಅವರು ಅನುಸೂಯಾ ಅವರ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಉಸಿರುಗಟ್ಟಿ ಹಲ್ಲೆ ನಡೆಸಿದ್ದಾರೆ, ಈ ವೇಳೆ ರಕ್ತದೊತ್ತಡ ಕಡಿಮೆಯಾಗಿ ಅನುಸೂಯಾ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.