ರಾಜ್ಯದಲ್ಲಿ ಜುಲೈ-ಆಗಸ್ಟ್ ನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ: ಆರ್.ಅಶೋಕ್
ಕೋವಿಡ್ ನಿಯಂತ್ರಣ ತಂಡಕ್ಕೆ ಇನ್ನಷ್ಟು ತಜ್ಞ ವೈದ್ಯರ ನೇಮಕ ಮಾಡಲಾಗುವುದು, ಸೋಂಕು ಲಕ್ಷಣ ಹೊಂದಿರುವವರು ಆಸ್ಪತ್ರೆಗೆ ದಾಖಲಾಗಲು ಆಗಮಿಸಿದರೆ ಪ್ರವೇಶ ನಿರಾಕರಿಸಬಾರದು,...

ಬೆಂಗಳೂರು: ಕೋವಿಡ್ ನಿಯಂತ್ರಣ ತಂಡಕ್ಕೆ ಇನ್ನಷ್ಟು ತಜ್ಞ ವೈದ್ಯರ ನೇಮಕ ಮಾಡಲಾಗುವುದು, ಸೋಂಕು ಲಕ್ಷಣ ಹೊಂದಿರುವವರು ಆಸ್ಪತ್ರೆಗೆ ದಾಖಲಾಗಲು ಆಗಮಿಸಿದರೆ ಪ್ರವೇಶ ನಿರಾಕರಿಸಬಾರದು, ಸೋಂಕು ಪತ್ತೆ ಪರೀಕ್ಷೆಯ ವರದಿಯನ್ನು ಮೊದಲು ಸರ್ಕಾರಕ್ಕೆ ತಿಳಿಸಬೇಕು, ಬೇರಾರಿಗೂ ಮಾಹಿತಿ ಬಹಿರಂಗಪಡಿಸುವಂತಿಲ್ಲ, ಸರ್ಕಾರದ ಆರೋಗ್ಯಾಧಿಕಾರಿ ಮಾಹಿತಿ ಬಿಡುಗಡೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಹಾಗೂ ರಾಜ್ಯದಲ್ಲಿ ಹರಡುತ್ತಿರುವ ಕೊರೋನಾ ವೈರಾಣು ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಜುಲೈ 7ರ ನಂತರ ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಚಿಂತನೆ ಇದೆ. ರಾಜ್ಯದಲ್ಲಿ ವೈರಾಣು ಸೋಂಕು ಪರಿಸ್ಥಿತಿ ಇನ್ನೂ ಆರು ತಿಂಗಳು ಇದೇ ರೀತಿ ಮುಂದುವರಿಯುವ ಸಾಧ್ಯತೆ ಕಂಡುಬರುತ್ತಿದೆ ಎಂದು ಹೇಳಿದರು.
ತಜ್ಞರ ಸಮಿತಿಯ ವರದಿಯ ಪ್ರಕಾರ, ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಜುಲೈ ಮತ್ತು ಆಗಸ್ಟ್ ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರ ಏರಿಕೆಯಾಗಲಿದೆ ಎಂದು ಸಚಿವರು ಹೇಳಿದರು. ಅಲ್ಲದೆ ಕೇವಲ ಪರೀಕ್ಷೆಯ ಪ್ರಮಾಣ ಮಾತ್ರ ಹೆಚ್ಚಾಗಿಲ್ಲ, ಸೋಂಕಿತರು ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಸಚಿವರು ಒಪ್ಪಿಕೊಂಡರು.
ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇಲ್ಲ.ಬೆಂಗಳೂರು ನಗರದ ಉದ್ಯಾನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ತರುವ ಆಲೋಚನೆ ಇದೆ ಎಂದು ಆರ್. ಅಶೋಕ ತಿಳಿಸಿದರು.
ಅವ್ಯವಸ್ಥೆಯ ದೂರು ಬಂದ ಹಿನ್ನೆಲೆಯಲ್ಲಿ ವಿಕ್ಟೋರಿಯಾ, ಹಜ್ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ವೈದ್ಯಕೀಯ ಸಿಬ್ಬಂದಿ ಆರು ತಿಂಗಳ ಕಾಲ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧವಾಗಬೇಕು ಎಂದು ಸೂಚನೆ ನೀಡಲಾಗಿದೆ. ವೈದ್ಯರ ಅಗತ್ಯ ಕೂಡ ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು ನೇಮಿಸುವಂತೆ ಸೂಚಿಸಲಾಗಿದೆ ಎಂದರು.
ಕೆಲವು ಕಡೆ ಹೋಟೆಲ್ ಗಳಲ್ಲಿ ವೈದ್ಯರ ಮೇಲೆ ಗಲಾಟೆ ಮಾಡಿದ್ದಾರೆ. ಗೃಹ ಸಚಿವರ ಜೊತೆ ಮಾತನಾಡಿ ವೈದ್ಯರಿಗೆ ಸೂಕ್ತ ರಕ್ಷಣೆ ಕೊಡಬೇಕು ಮುಂದೆ ಇಂತಹ ಪ್ರಕರಣ ವರದಿಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಲಾಗಿದೆ ಎಂದರು.
ಡಾಕ್ಟರ್ ಗಳು ವಾರ್ಡ್ ಗಳಿಗೆ ಹೋಗುವುದಿಲ್ಲ ಅಂತ ದೂರು ಬಂದಿದೆ. ಪ್ಯಾರಾಮೆಡಿಕಲ್ ಸ್ಟಿಕರ್ ಗಳನ್ನು ಹಾಕಿಕೊಂಡು ಹೋಗಬೇಕು. ಕೆಲವು ಕಡೆ ಹೋಟೆಲ್ ಗಳಲ್ಲಿ ವೈದ್ಯರ ಮೇಲೆ ಗಲಾಟೆ ಮಾಡಿದ್ದಾರೆ. ವಿಕ್ಟೋರಿಯಾದಲ್ಲಿ ಎಲ್ಲಾ ಬೆಡ್ ಗಳಿಗೆ ನಂಬರಿಂಗ್ ಮಾಡಲಾಗಿದೆ ಎಂದರು.
ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಸಂಸದ ಪಿ.ಸಿ ಮೋಹನ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


