ತವರಿಗೆ ಮರಳಿರುವ ಮೂಲ ನಿವಾಸಿಗಳ ಕೌಶಲ್ಯ ಸಮರ್ಪಕ ಬಳಕೆಗೆ ರಾಜ್ಯ ಚಿಂತನೆ!
ಬೇರೆ ಬೇರೆ ಕಡೆಗಳಿಂದ ರಾಜ್ಯಕ್ಕೆ ವಲಸಿಗರು ಮರಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರ ಕೌಶಲ್ಯವನ್ನು ಬಳಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಬೆಂಗಳೂರು: ಬೇರೆ ಬೇರೆ ಕಡೆಗಳಿಂದ ರಾಜ್ಯಕ್ಕೆ ವಲಸಿಗರು ಮರಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರ ಕೌಶಲ್ಯವನ್ನು ಬಳಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸುಮಾರು 41 ಸಾವಿರಕ್ಕಿಂತ ಅಧಿಕ ಮಂದಿ ವಿವಿಧ ರಾಜ್ಯಗಳು ಮತ್ತು ಬೇರೆ ಬೇರೆ ದೇಶಗಳಿಂದ ವಾಪಾಸಾಗಿದ್ದಾರೆ. ಕರ್ನಾಟಕ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಕೃಷಿ ಹಾಗೂ ಕಟ್ಟಡ ನಿರ್ಮಾಣ ಮತ್ತು ಪ್ರವಾಸೋದ್ಯಮ ವಲಯಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ವಾಪಾಸಾದವರಿಗೆ ನಿರುದ್ಯೋಗ ಸಮಸ್ಯೆ ಕಾಡದಿರಲಿ ಎಂಬ ಉದ್ದೇಶದಿಂದ ಅವರಿಗೆ ಯಾವ ವಲಯದಲ್ಲಿ ಆಸಕ್ತಿ ಇದೆಯೋ ಅಲ್ಲಿ ನೋಂದಾಯಿಸಿಕೊಳ್ಳಲು ತಿಳಿಸಿದೆ. ಅವರ ವಿದ್ಯಾರ್ಹತೆಗೆ ಬೇಕಾದ ತರಬೇತಿ ನೀಡಲು ವ್ಯವಸ್ಥೆ ಮಾಡಿದೆ. ಕೃಷಿ, ಕರ ಕುಶಲ ಕೈಗಾರಿಕೆ ಮತ್ತು ಲಾಜಿಸ್ಟಿಕ್ ಸೇರಿದಂತೆ ಸುಮಾರು 40 ಆಯ್ಕೆಯ ಆವಕಾಶ ನೀಡಿದೆ.
ಹೊರಗಿನಿಂದ ಬಂದವರಿಗೆ ಇಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಸುಮಾರು 41 ಸಾವಿರ ಮಂದಿ ಉದ್ಯೋಗಕ್ಕಾಗಿ ರಿಜಿಸ್ಟ್ರಾರ್ ಮಾಡಿದ್ದಾರೆ, ಅದರಲ್ಲಿ 7 ಸಾವಿರ ಮಂದಿ ಭಾರತದಿಂದ ಹೊರಗಿದ್ದವರು, ಪ್ರಮುಖವಾಗಿ ಮಧ್ಯಪ್ರಾಚ್ಯ ದೇಶಗಳಿಂದ ವಾಪಾಸಾಗಿರುವವರು. ಕೊರೋನಾ ಸಮಸ್ಯೆಯಿಂದಾಗಿ ಉದ್ಯೋಗ ಕಳೆದುಕೊಂಡು ಇಲ್ಲಿಗೆ ಬಂದಿರುವವರಾಗಿದ್ದಾರೆ ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಬ್ರಿಟನ್ ಮತ್ತು ಅಮೆರಿಕಾಗಳಿಂದ ಇನ್ನೂ ಹೆಚ್ಚಿನ ಮಂದಿ ವಾಪಸ್ ಬರುವ ನಿರೀಕ್ಷೆಯಿದೆ, ಹೆಚ್ಚಿನವರು ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದ ಕಡೆ ಒಲವು ತೋರಿದ್ದಾರೆ.ಅವರನ್ನೆಲ್ಲಾ ಒಂದು ಇನ್ಸ್ ಸ್ಟಿಟ್ಯೂಟ್ ನಲ್ಲಿ ಸೇರಿಸಿ ತರಬೇತಿ ನೀಡಲಾಗುವುದು ಎಂದು ಹೇಳಿದ್ದಾರೆ. ಅವರಿಗೆಲ್ಲಾ ಕಡಿಮೆ ಅವಧಿಯ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುತ್ತದೆ. ಅವರು ಸ್ವಂತವಾಗಿ ಉದ್ಯೋಗ ಬೇಕಾದರೂ ಆರಂಭಿಸಬಹುದಾಗಿದೆ. ಅವರಿಗೆ ಲೋನ್ ನೀಡಲು ನಾವು ಸಿದ್ಧರಿದ್ದೇವೆ, ಈ ಅವಕಾಶ ಬಳಸಿಕೊಂಡು ರಾಜ್ಯದ ಆರ್ಥಿಕತೆ ಉತ್ತಮಗೊಳಿಸಲು ಸಹಾಯವಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


