ಹೆಲ್ಮೆಟ್ ನಿಂದಲೂ ಸೋಂಕು ಪ್ರಸರಣ ಭೀತಿ, ವಿನಾಯಿತಿ ಕೇಳಿದ ವ್ಯಕ್ತಿಗೆ ಆಯುಕ್ತ ಭಾಸ್ಕರ್ ರಾವ್ ನೀಡಿದ ಉತ್ತರ...!
ಕೊರೋನಾ ಸಾಂಕ್ರಾಮಿಕ ಕಾಲದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿನಾಯಿತಿ ನೀಡಿ ಎಂದು ಕೇಳಿದ ವ್ಯಕ್ತಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನೀಡಿದ ಖಡಕ್ ಉತ್ತರ ಇದೀಗ ವೈರಲ್ ಆಗುತ್ತಿದೆ.

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಕಾಲದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿನಾಯಿತಿ ನೀಡಿ ಎಂದು ಕೇಳಿದ ವ್ಯಕ್ತಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನೀಡಿದ ಖಡಕ್ ಉತ್ತರ ಇದೀಗ ವೈರಲ್ ಆಗುತ್ತಿದೆ.
ಹೌದು.. ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರು ಮುಟ್ಟುವ ಜಾಗ ಸ್ಪರ್ಶಿಸಿದ ಎಲ್ಲರಿಗೂ ಸೋಂಕು ಒಕ್ಕರಿಸುತ್ತಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ವ್ಯಕ್ತಿಯೋರ್ವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಟ್ವೀಟ್ ಮೂಲಕ ಹೆಲ್ಮೆಟ್ ವಿನಾಯಿತಿ ಕೇಳಿದ್ದಾರೆ.
'ಜನ ತಮ್ಮ ತಮ್ಮ ಹೆಲ್ಮೆಟ್ ಗಳನ್ನು ತೆಗೆದು ಸಾರ್ವಜನಿಕ ಸ್ಥಳಗಳಲ್ಲಿನ ಟೇಬಲ್, ಕುರ್ಚಿ, ಇತರೆ ವಸ್ತುಗಳ ಮೇಲೆ ಇಡುತ್ತಿದ್ದಾರೆ. ಸಾಮಾನ್ಯವಾಗಿ ಹೆಲ್ಮೆಟ್ ಗಳನ್ನೂ ಯಾರೂ ಸ್ವಚ್ಛಗೊಳಿಸುವುದಿಲ್ಲ. ಸೋಂಕಿತ ವ್ಯಕ್ತಿ ಕೂಡ ಹೆಲ್ಮೆಟ್ ಬಳಕೆ ಮಾಡಿ ಆ ಹೆಲ್ಮೆಟ್ ಈ ರೀತಿ ಎಲ್ಲೆಂದರಲ್ಲಿ ಇಟ್ಟರೆ ಅದರಿಂದ ಸೋಂಕು ಪ್ರಸರಣ ಸಾಧ್ಯತೆ ಹೆಚ್ಚು. ಹೀಗಾಗಿ ಕೊರೋನಾ ಸಾಂಕ್ರಾಮಿಕ ಮುಕ್ತಾಯದವರೆಗೂ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿನಾಯಿತಿ ನೀಡಿ ಎಂದು ಸಂಜಯ್ ಎಂಬ ಖಾತೆದಾರರು ಮನವಿ ಮಾಡಿದ್ದಾರೆ.
ಈ ಟ್ವೀಟ್ ಗೆ ಅಷ್ಟೇ ನಾಜೂಕಾಗಿ ಉತ್ತರಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಹೆಲ್ಮೆಟ್ ಕಡ್ಡಾಯ ನಿಯಮ ಪ್ರಾಣಾಪಾಯ ತಪ್ಪಿಸುವ ಮುಂಜಾಗ್ರತಾ ಕ್ರಮವೇ ಹೊರತು ಸಾರ್ವಜನಿಕರ ಮೇಲೆ ಹೇರಿರುವ ಶಿಕ್ಷೆಯಲ್ಲ. ನೀವು ಹೆಲ್ಮೆಟ್ ಧರಿಸದೇ ಇದ್ದರೆ ಅದು ನೀವು ನಿಮ್ಮ ಕುಟುಂಬಕ್ಕೆ ಮಾಡುವ ಅನ್ಯಾಯವಾಗುತ್ತದೆ. ಅಂತಿಮ ಆಯ್ಕೆ ನಿಮ್ಮದೇ.. ಪ್ರತೀ ನಿತ್ಯ ಅಪಘಾತಗಳಂತಹ ಘಟನೆಗಳನ್ನು ನೋಡುತ್ತಿರುತ್ತೇವೆ. ಹೆಲ್ಮೆಟ್ ಧರಿಸುವ ಮೂಲಕ ನಿಮ್ಮನ್ನು ಮತ್ತು ಕುಟುಂಬವನ್ನು ಸುರಕ್ಷಿತವಾಗಿರಿಸಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


