ರಾಜ್ಯ

ಗುಡ್ ನ್ಯೂಸ್: ರಾಜ್ಯದಲ್ಲಿ ಒಂದೇ ದಿನ 110 ಕೊರೋನಾ ರೋಗಿಗಳು ಡಿಸ್ಚಾರ್ಜ್!

ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆ ಆತಂಕಕ್ಕೆ ಕಾರಣವಾದರೇ ಖುಷಿ ಪಡುವ ಮತ್ತೊಂದು ವಿಷಯವಿದೆ, ಒಂದೇ ದಿನ ಗುಣಮುಖರಾದ 110 ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಗುಡ್ ನ್ಯೂಸ್: ರಾಜ್ಯದಲ್ಲಿ ಒಂದೇ ದಿನ 110 ಕೊರೋನಾ ರೋಗಿಗಳು ಡಿಸ್ಚಾರ್ಜ್!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದು ಒಂದೆಡೆ ಆತಂಕಕ್ಕೆ ಕಾರಣವಾದರೇ ಖುಷಿ ಪಡುವ ಮತ್ತೊಂದು ವಿಷಯವಿದೆ, ಒಂದೇ ದಿನ ಗುಣಮುಖರಾದ 110 ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಯಚೂರಿನಲ್ಲಿ 35, ಯಾದಗಿರಿಯಲ್ಲಿ 18, ಬೀದರ್ ನಲ್ಲಿ 14, ಚಿಕ್ಕಮಗಳೂರು-4, ಬೆಳಗಾವಿ 16, ಇಬ್ಬರು ಶಿವಮೊಗ್ಗ, 10 ದಕ್ಷಿಣ ಕನ್ನಡ, ಬೆಂಗಳೂರು ನಗರದಲ್ಲಿ 6 ಮತ್ತು ಕೊಪ್ಪಳದಲ್ಲಿ ಒಂದು ಹಾಗೂ ಚಿಕ್ಕಬಳ್ಳಾಪುರದಲ್ಲಿ 1 ಬೇರೆ ರಾಜ್ಯಗಳ ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ನಿನ್ನೆ 187 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 3408ಕ್ಕೇರಿಕೆಯಾಗಿದೆ. ಇಂದು ಪತ್ತೆಯಾದ ಬಹುತೇಕ ಸೋಂಕಿತರು ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬೆಂಗಳೂರು 28, ಕಲಬುರಗಿ 24, ಮಂಡ್ಯ 15, ಉಡುಪಿ 73, ಹಾಸನ 16, ಬೀದರ್ 2, ಚಿಕ್ಕಬಳ್ಳಾಪುರ 5, ದಕ್ಷಿಣ  ಕನ್ನಡ 4, ವಿಜಯಪುರ 1, ಬಾಗಲಕೋಟೆ 2, ಬಳ್ಳಾರಿ 3, ಶಿವಮೊಗ್ಗ 9, ಧಾರವಾಡ 2, ಕೋಲಾರ 1, ಹಾವೇರಿ 1 ಮತ್ತು ರಾಮನಗರದಲ್ಲಿ 1 ಪ್ರಕರಣ ಕಂಡು ಬಂದಿದೆ.

ಬೆಂಗಳೂರಿನ 90 ವರ್ಷದ ವೃದ್ಧ (ರೋಗಿ 492) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ವೃದ್ಧ ರೋಗಿ 419ರ ದ್ವಿತೀಯ ಸಂಪರ್ಕದಲ್ಲಿದ್ದರು. ಏಪ್ರಿಲ್ 24ರಂದು ಕೋವಿಡ್-19 ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಮೇ 31ರಂದು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.