ಮಾತಿನ ಚಕಮಕಿ ವೇಳೆ ಹತ್ಯೆ ಮಾಡಲು ಬಂದ ಅಪ್ಪನನನ್ನು ಕೊಂದ 15 ವರ್ಷದ ಬಾಲಕಿ!
15 ವರ್ಷದ ಬಾಲಕಿಯೊಬ್ಬಳು ತನ್ನನ್ನು ಕೊಲ್ಲಲು ಯತ್ನಿಸಿದ ತಂದೆಯನ್ನೇ ಕತ್ತರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಬೆಂಗಳೂರು: 15 ವರ್ಷದ ಬಾಲಕಿಯೊಬ್ಬಳು ತನ್ನನ್ನು ಕೊಲ್ಲಲು ಯತ್ನಿಸಿದ ತಂದೆಯನ್ನೇ ಕತ್ತರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಬನ್ನೇರುಘಟ್ಟ ರಸ್ತೆಯ ಮಂತ್ರಿ ಪ್ಯಾರಡೈಸ್ ಅಪಾರ್ಟ್ಮೆಂಟ್ ನಿವಾಸಿ ಸಪ್ತಕ್ ಬ್ಯಾನರ್ಜಿ (46) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಈ ಕೊಲೋ ಸಂಬಂಧ ಮೃತನ ಪತ್ರಿಯನ್ನು ಮೈಕೋಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
2ನೇ ಮಗುವಿನ ಹೆರಿಗೆ ವೇಳೆ ಹೆಂಡತಿ ಮೃತಪಟ್ಟ ಬಳಿಕ ಮಕ್ಕಳ ಪಾಲನೆ ಹೊತ್ತಿದ್ದ ಬ್ಯಾನರ್ಜಿ, ಮದ್ಯವ್ಯಸನಿಯಾಗಿದ್ದ ಉದ್ಯೋಗ ತೊರೆದೆ ತಾನು ಬಾಡಿಗೆಗೆ ನೀಡಿದ್ದ ಮನೆಯಿಂದ ಬರುತ್ತಿದ್ದ ರೂ.30 ಸಾವಿರವನ್ನೇ ಆಧರಿಸಿ ಜೀವನ ಮಾಡುತ್ತಿದ್ದ. ಮಕ್ಕಳನ್ನು ಶಾಲೆ ಬಿಡಿಸಿದ್ದ. ಬಂಧುಗಳಿಂದ ದೂರ ಇರಿಸಿದ್ದ.
ಆದರೆ, ಓದುವ ಹಂಬಲವಿದ್ದ ಬಾಲಕಿ, ತಂದೆಗೆ ತಿಳಿಯದಂತೆ ನೇರವಾಗಿ ಎಸ್ಎಸ್ಎಲ್'ಸಿ ಪರೀಕ್ಷೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಳು. ಅಂತೆಯೇ ತಂದೆ ಮಲಗಿದ ಬಳಿಕ ಬಾಲಕಿ, ಬುಧವಾರ ರಾತ್ರಿ 1 ಗಂಟೆಯಲ್ಲಿ ಓದುತ್ತಿದ್ದಳು. ಆ ವೇಳೆ ಎಚ್ಚರಗೊಂಡ ಬ್ಯಾನರ್ಜಿ, ತನ್ನಿಚ್ಛೆಗೆ ವಿರುದ್ಧವಾಗಿ ವ್ಯಾಸಾಂಗ ಮಾಡುತ್ತಿದ್ದಾಳೆಂದು ಮದ್ಯರಾತ್ರಿ ಪಿಯಾನೋ ನುಡಿಸಲು ಆರಂಭಿಸಿದ್ದಾನೆ. ಈ ವೇಳೆ ಕೋಪಗೊಂಡ ಬಾಲಕಿ ನಿಲ್ಲಿಸುವಂತೆ ತಿಳಿಸಿದ್ದಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಬಳಿಕ ಕೆರಳಿ ಕತ್ತರಿ ತೆಗೆದುಕೊಂಡು ಬಾಲಕಿಯನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ. ಆಗ ಅದೇ ಕತ್ತರಿಯನ್ನು ಕಿತ್ತುಕೊಂಡ ಬಾಲಕಿ ಬಾಲಕಿ ತಂದೆಯ ಎದೆಗೆ ಪ್ರತಿಯಾಗಿ ಚುಚ್ಚಿದ್ದಾಳೆ. ಕೂಡಲೇ ಬ್ಯಾನರ್ಜಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಾಬರಿಗೊಂಡ ಬಾಲಕಿ ನೆರೆಹೊರೆಯವರನ್ನು ಕರೆದಿದ್ದಾಳೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


