ಹಾಸನ: ಯುವತಿ ಅಪಹರಣ ಆರೋಪ; ಗುಂಡಿಟ್ಟು ವ್ಯಕ್ತಿ ಹತ್ಯೆ
ಯುವತಿಯೊಬ್ಬಳನ್ನು ಅಪಹರಣ ಮಾಡಿದ್ದಾನೆಂದು ಆರೋಪಿಸಿ 30 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಆಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ.

ಹಾಸನ: ಯುವತಿಯೊಬ್ಬಳನ್ನು ಅಪಹರಣ ಮಾಡಿದ್ದಾನೆಂದು ಆರೋಪಿಸಿ 30 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಆಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ.
ಮಧು (30) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಮಧು ಸೊಪ್ಪಿನಹಳ್ಳಿಯ ನಿವಾಸಿಯಾಗಿದ್ದು, ಇದೇ ಗ್ರಾಮದ ಮತ್ತೊಬ್ಬ ನಿವಾಸಿ ರೂಪೇಶ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಮೃತಪಟ್ಟ ಮಧು ಆರೋಪಿ ರೂಪೇಶ್ ಅಣ್ಣನ ಮಗಳನ್ನು ಪ್ರೀತಿಸಿದ್ದು, ಕೆಲ ತಿಂಗಳ ಹಿಂದಷ್ಟೇ ಆಕೆಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಯುವತಿಯ ಮನೆಯವರು ಹುಡುಗಿಯನ್ನು ಹುಡುಕಿ ಕರೆತಂದಿದ್ದರು. ನಂತರ ಪೊಲೀಸರು ಮಧುಗೆ ಬುದ್ದಿ ಮಾತು ಹೇಳಿದ್ದರು. ಬಳಿಕ ಮಧುಗೆ ಜಾಮೀನು ದೊರೆತಿತ್ತು. ಆದರೂ ಯುವತಿಯೊಂದಿಗಿನ ಸಂಪರ್ಕವನ್ನು ಮಾತ್ರ ಮುಂದುವರೆಸಿದ್ದ. ಈ ಸಂಬಂಧ ಎರಡೂ ಕುಟುಂಬಗಳ ನಡುವೆ ವೈಷಮ್ಯ ಮೂಡಿತ್ತು.
ಇದರಂತೆ ಮಧು ಮತ್ತೆ ಯುವತನ್ನು ಕರೆದೊಯ್ಯಲು ಮುಂದಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ರೂಪೇಶ್ ಕೂಡಲೇ ಹಿಂಬಾಲಿಸಿ ಮಧುನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ.
ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ಆರೋಪಿ ರೂಪೇಶ್ ಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


