ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ತಗ್ಗಲಿದ್ಯಾ ಕೊರೋನಾ ಪ್ರಮಾಣ?
ಲಾಕ್ ಡೌನ್ 2.0 ಅಂಗವಾಗಿ ಕೇಂದ್ರ ಸರ್ಕಾರ ಜುಲೈ 1 ರಿಂದ ರಾತ್ರಿ ಕರ್ಫ್ಯೂ ಸಮಯದ ಮಿತಿಯನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನಿಗದಿ ಪಡಿಸಬಹುದು, ಆದರೆ ಕರ್ನಾಟಕದಲ್ಲಿ ಎರಡು ಗಂಟೆ ಮುಂಚಿತವಾಗಿ ಆರಂಭವಾಗಲಿದೆ.

ಬೆಂಗಳೂರು: ಲಾಕ್ ಡೌನ್ 2.0 ಅಂಗವಾಗಿ ಕೇಂದ್ರ ಸರ್ಕಾರ ಜುಲೈ 1 ರಿಂದ ರಾತ್ರಿ ಕರ್ಫ್ಯೂ ಸಮಯದ ಮಿತಿಯನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನಿಗದಿ ಪಡಿಸಬಹುದು, ಆದರೆ ಕರ್ನಾಟಕದಲ್ಲಿ ಎರಡು ಗಂಟೆ ಮುಂಚಿತವಾಗಿ ಆರಂಭವಾಗಲಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯಿಂದಾಗಿ ರಾತ್ರಿ ಕರ್ಫ್ಯೂ ಹೇರಿರುವ ಸರ್ಕಾರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಿದೆ, ಜೊತೆಗೆ ಭಾನುವಾರದ ಲಾಕ್ ಡೌನ್ ಆಗಸ್ಟ್ 2ರವರೆಗೆ ಮುಂದುವರಿಸಲು ನಿರ್ಧರಿಸಿದೆ.
ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ರಾಜ್ಯದಾದ್ಯಂತ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳ ಜೊತೆಗೆ ಅನೇಕ ಪಾಳಿಯಲ್ಲಿ ಕೈಗಾರಿಕಾ ಘಟಕಗಳಲ್ಲಿ ಕೆಲಸ ಮಾಡುವುದು,, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸರಕುಗಳ ಸಾಗಣೆ, ಪ್ರಮುಖ ಜಿಲ್ಲಾ ರಸ್ತೆಗಳು, ಸರಕುಗಳನ್ನು ಲೋಡ್ ಮಾಡುವುದು ಮತ್ತು ಅನ್ ಲೋಡ್ ಮತ್ತು ಬಸ್ಸುಗಳು, ರೈಲುಗಳು ಮತ್ತು ವಿಮಾನಗಳಿಂದ ಇಳಿದ ನಂತರ ಅವರ ಸ್ಥಳಗಳಿಗೆ ವ್ಯಕ್ತಿಗಳ
ಪ್ರಯಾಣಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ತಿಳಿಸಿದ್ದಾರೆ,
ಮೊದಲೇ ನಿರ್ಧರಿತ ಮದುವೆ ಕಾರ್ಯಕ್ರಮಗಳಿಗೆ ಭಾನುವಾರದ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ,ಜುಲೈ 10ರಿಂದ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಕಚೇರಿಗಳ ನೌಕರರಿಗೆ ಒಂದು ತಿಂಗಳ ಕಾಲ ಎಲ್ಲ ಶನಿವಾರ ರಜೆ ನೀಡಿ, ವಾರದ ಕೆಲಸದ ದಿನಗಳನ್ನು ಐದು ದಿನಗಳಿಗೆ ಇಳಿಸಲಾಗಿದೆ.
ಕೇಂದ್ರದ ನಿರ್ದೇಶನಗಳನ್ನು ಅನುಸರಿಸಿ, ಕರ್ನಾಟಕವು ಆನ್‌ಲೈನ್ ಮತ್ತು ದೂರ ಶಿಕ್ಷಣ ತರಗತಿಗಳನ್ನು ಹೊರತು ಪಡಿಸಿ, ಮೆಟ್ರೋ ರೈಲು, ಸಿನೆಮಾ ಹಾಲ್‌ಗಳು, ಜಿಮ್ನಾಷಿಯಂಗಳು, ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ಸಭಾಂಗಣಗಳು, ಚಿತ್ರಮಂದಿರಗಳು, ಬಾರ್‌ಗಳು, ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ತೆರೆಯದಿರಲು ಆದೇಶ ಹೊರಡಿಸಿದೆ. ಸಭಾಂಗಣಗಳು, ಸಾಮಾಜಿಕ, ರಾಜಕೀಯ, ಧಾರ್ಮಿಕ, ಮನರಂಜನೆ, ಕ್ರೀಡೆ ಅಥವಾ ಯಾವುದೇ ದೊಡ್ಡ ಮಟ್ಟದ ಕ್ರೀಡಾ ಕೂಟಗಳನ್ನು ಆಯೋಜಿಸುವುದನ್ನು ನಿಷೇಧಿಸಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ತರಬೇತಿ ಸಂಸ್ಥೆಗಳಿಗೆ ನಿರ್ದಿಷ್ಟ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು) ಯೊಂದಿಗೆ ಜುಲೈ 15 ರ ನಂತರ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.
ಕಂಟೈನ್‌ಮೆಂಟ್ ವಲಯಗಳಲ್ಲಿ ಲಾಕ್ ಡೌನ್ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು ಮತ್ತು ಜನರ ತುರ್ತುಸ್ಥಿತಿಯನ್ನು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಅಥವಾ ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅನುಮತಿಸಲಾಗುತ್ತದೆ.
ಅಂತರರಾಜ್ಯ ಮತ್ತು ಅಂತರರಾಜ್ಯ ಪ್ರಯಾಣಕ್ಕೆ ಪಾಸ್‌ಗಳು ಅಥವಾ ಅನುಮತಿಗಳನ್ನು ಪಡೆದುಕೊಳ್ಳಲು ಯಾವುದೇ ನಿರ್ಬಂಧಗಳು ಅಥವಾ ಅವಶ್ಯಕತೆಗಳಿಲ್ಲ, ಆದರೆ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸೇವಾ ಸಿಂಧು ಪೋರ್ಟಲ್ ನೋಂದಣಿ ಮತ್ತು ಕ್ವಾರಂಟೈನ್ ಮಾನದಂಡಗಳ ಕಡ್ಡಾಯವಾಗಿ ಮುಂದುವರೆಯಲಿದೆ.
ಕೆಲವು ನಿರ್ಬಂಧಗಳೊಂದಿಗೆ ಶ್ರಮಿಕ್ ರೈಲುಗಳ ಸಂಚಾರ ಮತ್ತು ನಿಯಮಿತ ಸಾರಿಗೆ ಸಂಚಾರ ಮುಂದುವರಿಯುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


