ಅವರೇ ಮೇಳ ಬೆಂಗಳೂರು ಸಂಸ್ಕೃತಿ ಅವಿಭಾಜ್ಯ ಅಂಗ: ಜ.16-26 ವರೆಗೆ ಮೇಳ ಆಯೋಜನೆ
ಸಿಲಿಕಾನ್ ಸಿಟಿ ಬೆಂಗಳೂರಿನ ಸಾಂಸ್ಕೃತಿಕತೆಗೆ ವೇದಿಕೆಯಾಗಿದ್ದ ವಿವಿಪುರಂನ ಅವರೇ ಮೇಳದ ಆಯೋಜನೆ ಕುರಿತಂತೆ ಭುಗಿಲೆದ್ದಿದ್ದ ವಿವಾದಕ್ಕೆ ಬಿಬಿಎಂಪಿ ಮೇಯರ್ ತೆರೆ ಎಳೆದಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಾಂಸ್ಕೃತಿಕತೆಗೆ ವೇದಿಕೆಯಾಗಿದ್ದ ವಿವಿಪುರಂನ ಅವರೇ ಮೇಳದ ಆಯೋಜನೆ ಕುರಿತಂತೆ ಭುಗಿಲೆದ್ದಿದ್ದ ವಿವಾದಕ್ಕೆ ಬಿಬಿಎಂಪಿ ಮೇಯರ್ ತೆರೆ ಎಳೆದಿದೆ.
ಹೌದು.. ಇದೇ ಜನವರಿ 16 ರಿಂದ 26ರವರೆಗೆ ಬೆಂಗಳೂರಿನ ವಿವಿಪುರಂನಲ್ಲಿ ಮೇಳೆ ಆಯೋಜನೆಗೆ ಬಿಬಿಎಂಪಿ ಅನುಮತಿ ನೀಡಿದ್ದು, ಈ ಕುರಿತಂತೆ ಸ್ವತಃ ಮೇಯರ್ ಗೌತಮ್ ಕುಮಾರ್ ಅವರು ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ಅವರು, 'ಅವರೆ ಮೇಳಕ್ಕೆ ಬಿಬಿಎಂಪಿ ಅನುಮತಿ ನೀಡಲಿದೆ. ಕಡಲೆಕಾಯಿ ಪರಿಷೆ ಹಾಗೂ ಅವರೆ ಮೇಳ ಬೆಂಗಳೂರು ಸಂಸ್ಕೃತಿಯ ಅವಿಭಾಜ್ಯ ಅಂಗ. ಆದರೆ, ಅವರೆ ಮೇಳದಿಂದ ಕಸದ ಸಮಸ್ಯೆ ಆಗುತ್ತದೆ. ಅನುಮತಿ ನೀಡುವುದು ಬೇಡ ಎಂದು ಕೆಲವರು ಪಾಲಿಕೆಯಲ್ಲಿ ಚರ್ಚೆ ನಡೆಸಿದ್ದರು. ಇದಕ್ಕೆ ನಾನು ಬೆಂಬಲ ಸೂಚಿಸಿಲ್ಲ. ಅವರೆ ಮೇಳ ನಡೆಯುತ್ತದೆ' ಎಂದು ತಿಳಿಸಿದ್ದಾರೆ.
ವಿವಿಪುರಂನಲ್ಲಿರುವ ವಾಸವಿ ಕಾಂಡಿಮೆಂಟ್ಸ್ ಪ್ರತಿ ವರ್ಷ ಈ ಮೇಳವನ್ನು ಆಯೋಜಿಸುತ್ತಿತ್ತು. ಪ್ರತಿವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಅವರೆ ಕಾಯಿ ಮೇಳವನ್ನು ವಾಸವಿ ಕಾಂಡಿಮೆಟ್ಸ್ ಏರ್ಪಡಿಸಿಕೊಂಡು ಬರುತ್ತದೆ. ಆದರೆ, ಈ ವರ್ಷ ಸ್ವಚ್ಛತೆಯ ಕಾರಣವೊಡ್ಡಿ ಮೇಳ ನಡೆಸಲು ಬಿಬಿಎಂಪಿ ಅನುಮತಿ ನೀಡುವುದಿಲ್ಲ ಎಂಬ ಸುದ್ದಿ ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸ್ವತಃ ಬಿಬಿಎಂಪಿ ಮೇಯರ್ ಈ ಕುರಿತ ವಿವಾದಕ್ಕೆ ತೆರೆ ಎಳೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


