ರಾಜ್ಯ

ಕಲಬುರಗಿ: ಹೂಳಲು ಸ್ಥಳವಿಲ್ಲದ್ದಕ್ಕೆ ವೃದ್ಧೆಯ ದೇಹದಾ‌ನ ಮಾಡಿದ ಗ್ರಾಮಸ್ಥರು!

ಶವ ಹೂಳಲು ಸ್ಥಳವಿಲ್ಲದ ಕಾರಣ ವೃದ್ಧೆಯ ದೇಹದಾನ ಮಾಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಂಕೂರ ಗ್ರಾಮದಲ್ಲಿ ನಡೆದಿದೆ.

ಕಲಬುರಗಿ: ಹೂಳಲು ಸ್ಥಳವಿಲ್ಲದ್ದಕ್ಕೆ ವೃದ್ಧೆಯ ದೇಹದಾ‌ನ ಮಾಡಿದ ಗ್ರಾಮಸ್ಥರು!
ಹೂಳಲು ಸ್ಥಳವಿಲ್ಲದ್ದಕ್ಕೆ ವೃದ್ಧೆಯ ದೇಹದಾ‌ನ ಮಾಡಿದ ಗ್ರಾಮಸ್ಥರು(ಒಳಚಿತ್ರದಲ್ಲಿ ಮೃತ ವೃದ್ದೆ ಸುಭದ್ರಮ್ಮ )
Published On :

ಕಲಬುರಗಿ:  ಶವ ಹೂಳಲು ಸ್ಥಳವಿಲ್ಲದ ಕಾರಣ ವೃದ್ಧೆಯ ದೇಹದಾನ ಮಾಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಂಕೂರ ಗ್ರಾಮದಲ್ಲಿ ನಡೆದಿದೆ.

75 ವರ್ಷದ ಸುಭದ್ರಮ್ಮ ಎಂಬ ವೃದ್ಧೆ ಮೃತಪಟ್ಟಿದ್ದು, ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದ ಹಿನ್ನೆಲೆಯಲ್ಲಿ ಕುಟುಂಬಸ್ಥರು ದೇಹದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ಈಗಾಗಲೇ ಸ್ಮಶಾನ ಇಲ್ಲದ ಕಾರಣ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನ ದೇಹದಾನ ಪತ್ರ ನೀಡಿದ್ದಾರೆ ಎನ್ನಲಾಗಿದೆ.

ಗಮನಾರ್ಹ ಸಂಗತಿ ಎಂದರೆ ಸಮಾಜಕಲ್ಯಾಣ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರದಲ್ಲೇ ಗ್ರಾಮಸ್ಥರು ಈ ಕಷ್ಟ ಅನುಭವಿಸುತ್ತಿದ್ದಾರೆ. ಇನ್ನು ಇದಾಗಲೇ ಸ್ಮಶಾನ ಭೂಮಿಗೆ ಜಮೀನು ಖರೀದಿಸಲು ಹಣ ಬಿಡುಗಡೆಯಾಗಿದ್ದರೂ ಸಹ ನಪ್ರತಿನಿಧಿ ಹಾಗು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದುವರೆಗೆ ಭೂಮಿ ಖರೀದಿಸಿಲ್ಲ. ಹಾಗಾಗಿ ಜಮೀನು ಉಳ್ಳವರು ತಮ್ಮ ಜಮೀನಿನಲ್ಲಿ ಶವ ಸಂಸ್ಕಾರ ನಡೆಸಿದ್ದರೆ ಜಮೀನು ಇಲ್ಲದವರು ಅನಿವಾರ್ಯವಾಗಿ ದೇಹದಾನಕ್ಕೆ ಮುಂಡಾಗಿದ್ದಾರೆ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.