ರಾಜ್ಯ

ಅಮೂಲ್ಯ ಎನ್ಕೌಂಟರ್ ಮಾಡಿದವರಿಗೆ ರೂ.10 ಲಕ್ಷ ಇನಾಮು: ರಾಮಸೇನೆ ಮುಖಂಡ 

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ಮತ್ತು ಎನ್ಆರ್'ಸಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ಅವರನ್ನು ಬಿಡುಗಡೆ ಮಾಡಿದರೆ ನಾವು ಎನ್ಕೌಂಟರ್ ಮಾಡುತ್ತೇವೆ, ಅಷ್ಟೇ ಅಲ್ಲ ಅವರನ್ನು ಎನ್ಕೌಂಟರ್ ಮಾಡಿದವರಿಗೆ ರೂ.10 ಲಕ್ಷ ಬಹುಮಾನ ಕೊಡುತ್ತೇವೆಂದು ಶ್ರೀರಾಮಸೇನೆ ಮುಖಂಡ ಸಂಜೀವ ಮರಡಿ ವಿವಾದಾತ್ಮಕ ಘೋಷಣೆ ಮಾಡಿದ್ದಾರೆ.

ಅಮೂಲ್ಯ ಎನ್ಕೌಂಟರ್ ಮಾಡಿದವರಿಗೆ ರೂ.10 ಲಕ್ಷ ಇನಾಮು: ರಾಮಸೇನೆ ಮುಖಂಡ 
ಅಮೂಲ್ಯ
Published On :

ಹೊಸಪೇಟೆ: ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ಮತ್ತು ಎನ್ಆರ್'ಸಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ಅವರನ್ನು ಬಿಡುಗಡೆ ಮಾಡಿದರೆ ನಾವು ಎನ್ಕೌಂಟರ್ ಮಾಡುತ್ತೇವೆ, ಅಷ್ಟೇ ಅಲ್ಲ ಅವರನ್ನು ಎನ್ಕೌಂಟರ್ ಮಾಡಿದವರಿಗೆ ರೂ.10 ಲಕ್ಷ ಬಹುಮಾನ ಕೊಡುತ್ತೇವೆಂದು ಶ್ರೀರಾಮಸೇನೆ ಮುಖಂಡ ಸಂಜೀವ ಮರಡಿ ವಿವಾದಾತ್ಮಕ ಘೋಷಣೆ ಮಾಡಿದ್ದಾರೆ. 

ಬಳ್ಳಾರಿಯಲ್ಲಿ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರು ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿರುವ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅಮೂಲ್ಯಳನ್ನು ಜೈಲಿನಿಂದ ಬಿಡುಗಡೆ ಮಾಡಬಾರದು. ಹಾಗೆ ಮಾಡಿದ್ದೇ ಆದರೆ, ಆಕೆಯನ್ನು ಎನ್ಕೌಂಟರ್ ಮಾಡಿ ಕೊಲ್ಲುತ್ತೇವೆ. ಅಲ್ಲದೆ. ಆಕೆಯನ್ನು ಯಾರೇ ಕೊಂದರೂ ಅವರಿಗೆ ರೂ.10 ಲಕ್ಷ ಬಹುಮಾನ ನೀಡುತ್ತೇವೆಂದು ಹೇಳಿದ್ದಾರೆ.

ಮರಡಿಯವರು ನೀಡಿರುವ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.