ರಾಜ್ಯಅಮೂಲ್ಯ ಎನ್ಕೌಂಟರ್ ಮಾಡಿದವರಿಗೆ ರೂ.10 ಲಕ್ಷ ಇನಾಮು: ರಾಮಸೇನೆ ಮುಖಂಡ
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ಮತ್ತು ಎನ್ಆರ್'ಸಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ಅವರನ್ನು ಬಿಡುಗಡೆ ಮಾಡಿದರೆ ನಾವು ಎನ್ಕೌಂಟರ್ ಮಾಡುತ್ತೇವೆ, ಅಷ್ಟೇ ಅಲ್ಲ ಅವರನ್ನು ಎನ್ಕೌಂಟರ್ ಮಾಡಿದವರಿಗೆ ರೂ.10 ಲಕ್ಷ ಬಹುಮಾನ ಕೊಡುತ್ತೇವೆಂದು ಶ್ರೀರಾಮಸೇನೆ ಮುಖಂಡ ಸಂಜೀವ ಮರಡಿ ವಿವಾದಾತ್ಮಕ ಘೋಷಣೆ ಮಾಡಿದ್ದಾರೆ.