ರಾಜ್ಯ

ಪಾಕ್ ಪರ ಘೋಷಣೆ: ಅಮೂಲ್ಯ ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೆ - ಡಿಕೆ ಶಿವಕುಮಾರ್

ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಪಾಕ್ ಪರ ಘೋಷಣೆ: ಅಮೂಲ್ಯ ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೆ - ಡಿಕೆ ಶಿವಕುಮಾರ್
ಅಮೂಲ್ಯ-ಡಿಕೆ ಶಿವಕುಮಾರ್
Published On :

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಸಿಎಎ ವಿರೋಧಿಸಿ ನಡೆದಿದ್ದ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೆ. ಆ ಹೆಣ್ಣು ಮಗಳು ಏನೋ ಹೇಳುವುದಕ್ಕೆ ಹೊರಟ್ಟಿದ್ದಳೋ ಅವಳನ್ನು ತಡೆದಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಅಮೂಲ್ಯಳ ಹಳೆಯ ವಿಡಿಯೋಗಳನ್ನು ನೋಡಿದ್ದೇನೆ. ಅವಳದ್ದೆ ಆದ ತತ್ವವನ್ನು ಆಕೆ ಹೊಂದಿದ್ದಾಳೆ. ಆದರೆ ಅವಳ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದು ದೇಶದ ವಿಚಾರ. ನಮ್ಮ ದೇಶವನ್ನು ಅಗೌರವದಿಂದ ಕಾಣುವುದು. ಬೇರೆ ದೇಶದ ಪರವಾಗಿ ನಿಂತುಕೊಳ್ಳುವಂತದ್ದಲ್ಲ. ಯಾರು ಅದಕ್ಕೆ ಪ್ರೋತ್ಸಾಹ ಕೊಡಬಾರದು. 

ಆದರೆ ಕೆಲ ವಿಷಯಗಳ ಪರವಾಗಿ ಧ್ವನಿ ಎತ್ತುವುದನ್ನು ಮೊಟಕುಗೊಳಿಸಬಾರದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.