ನಿಖಿಲ್-ರೇವತಿ ವಿವಾಹದಿಂದ ಮತ್ತಷ್ಟು ಗಟ್ಟಿಯಾಗಲಿದೆ ಜೆಡಿಎಸ್-ಕಾಂಗ್ರೆಸ್ ಬಂಧ!
ರಾಜಕೀಯ ವಿವಾಹಗಳು ಸಂಬಂಧಗಳನ್ನು ಬೆಸೆಯಲು ಕಾರಣವಾಗುತ್ತವೆ ಎಂಬುದನ್ನು ಕೇಳಿದ್ದೇವೆ, ರೇವತಿ- ನಿಖಿಲ್ ಕುಮಾರ್ ವಿವಾಹ ಕೂಡ ಇದೇ ರೀತಿಯಲ್ಲಿ ಸಾಗುತ್ತಿದೆ.

ಬೆಂಗಳೂರು: ರಾಜಕೀಯ ವಿವಾಹಗಳು ಸಂಬಂಧಗಳನ್ನು ಬೆಸೆಯಲು ಕಾರಣವಾಗುತ್ತವೆ ಎಂಬುದನ್ನು ಕೇಳಿದ್ದೇವೆ, ರೇವತಿ- ನಿಖಿಲ್ ಕುಮಾರ್ ವಿವಾಹ ಕೂಡ ಇದೇ ರೀತಿಯಲ್ಲಿ ಸಾಗುತ್ತಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯತೆ ಇರಲಿ, ಇಲ್ಲದಿರಲಿ, ಆದರೆ ನಿಖಿಲ್ ರೇವತಿ ವಿವಾಹ ಎಲ್ಲಾ ಮದುವೆಗಳ ತಾಯಿಯಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ರೇವತಿ-ನಿಖಿಲ್ ವಿವಾಹಕ್ಕೆ ಇನ್ನೂ ಕೇವಲ 62 ದಿನ ಮಾತ್ರ ಬಾಕಿ ಉಳಿದಿದೆ, ಕನಸಿನ ಮದುವೆಗಾಗಿ ಎಲ್ಲಾ ರೀತಿಯ ಸಿದ್ಧತೆ ಆರಂಭವಾಗಿದೆ,
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 57 ಎಕರೆ ಜಮೀನು ಕಲ್ಯಾಣ ಮಂಟಪವಾಗಿ ಬದಲಾಗುತ್ತಿದೆ. ಬೆಂಗಳೂರಿನಿಂಗ ಸುಮಾರು ಒಂದೂವರೆ ಗಂಟೆ ಪ್ರಯಾಣಿಸಿದರೇ ಈ ಸ್ಥಳ ಸಿಗುತ್ತದೆ, ಆದರೆ ಇಲ್ಲಿ ಯಾವುದೇ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ.
ಇನ್ನೂ ಮದುವೆ ಸ್ಥಳದಲ್ಲಿ ವಿವಿಐಪಿ ಗ್ಯಾಲಕ್ಸಿ ಧರೆಗಿಳಿಯಲಿದೆ. ಏಕೆಂದರೇ ವಧು-ವರರ ಎರಡು ಕುಟುಂಬಗಳು ರಾಜಕೀಯವಾಗಿ ಪ್ರಭಾವಿಶಾಲಿಗಳೇ, ವಿಐಪಿಗಳಿಗಾಗಿ 5 ಲಕ್ಷ ಆಹ್ವಾನ ಪತ್ರಿಕೆ ಮುದ್ರಣವಾಗುತ್ತಿವೆ, ಈ ವಿವಾಹಕ್ಕೆ ರಾಜ್ಯದ ಉದ್ದ ಮತ್ತು ಅಗಲವಾಗಿ ಪ್ರತಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸಲಾಗುತ್ತದೆ.
ಕೆಲ ದಿನಗಳ ಹಿಂದೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಲವು ಪ್ರಮುಖರು ಹಾಜರಾಗಿದ್ದರು. ಇನ್ನೂ ವಿವಾಹ ಮಹೋತ್ಸವಕ್ಕೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಟಾಲಿನ್, ಜಗಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕ ಗಣ್ಯರು ಪಾಲ್ಗೋಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಸೇರಿದಂತೆ ಹಲವು ರಾಷ್ಚ್ರೀಯ ನಾಯಕರು ಮತ್ತು ಸ್ಯಾಂಡಲ್ ವುಡ್ ಕಲಾವಿದರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


