ಅಯ್ಯೋ ರಾಮ, ಈ ಕಾರಣಕ್ಕೂ ಮದುವೆ ಮುರಿದು ಬೀಳುತ್ತಾ? ಹಾಸನದಲ್ಲಿ ವಿಚಿತ್ರ ಘಟನೆ!
ಮದುವೆಯ ಧಾರೆ ಸೀರೆ ವಿಚಾರಕ್ಕೆ ಗಂಡು-ಹೆಣ್ಣಿನ ಮನೆಯವರ ನಡುವೆ ಶುರುವಾದ ಜಗಳದಿಂದಾಗಿ ನಿಶ್ಚಯವಾಗಿದ್ದ ಮದುವೆ ಮರಿದು ಬಿದ್ದು ಹೋಗಿರೋ ಘಟನೆ ಹಾಸನ ಜಿಲ್ಲೆ ಬಿದರಿಕೆರೆ ಗ್ರಾಮದಲ್ಲಿ ನಡೆದಿದೆ.

ಹಾಸನ: ಮದುವೆಯ ಧಾರೆ ಸೀರೆ ವಿಚಾರಕ್ಕೆ ಗಂಡು-ಹೆಣ್ಣಿನ ಮನೆಯವರ ನಡುವೆ ಶುರುವಾದ ಜಗಳದಿಂದಾಗಿ ನಿಶ್ಚಯವಾಗಿದ್ದ ಮದುವೆ ಮರಿದು ಬಿದ್ದು ಹೋಗಿರುವ ಘಟನೆ ಹಾಸನ ಜಿಲ್ಲೆ ಬಿದರಿಕೆರೆ ಗ್ರಾಮದಲ್ಲಿ ನಡೆದಿದೆ.
ಫೆ.5 ರಂದು ಗ್ರಾಮದ ಬಿ.ಎನ್.ರಘುಕುಮಾರ್ ಮತ್ತು ಅದೇ ಗ್ರಾಮದ ಹುಡುಗಿ ನಡುವೆ ವಿವಾಹವಾಗಿ, ಇಂದು ಬೀಗರ ಔತಣ ಕೂಟ ನಡೆಯಬೇಕಿತ್ತು.
ಆದರೀಗ ಸಣ್ಣ ಕಾರಣಕ್ಕೆ ಮಂಗಳಕಾರ್ಯ ನಿಂತು ಹೋಗಿದ್ದು, ಹುಡುಗ ನಾಪತ್ತೆಯಾಗಿದ್ದಾನೆ. ಶುಭಕಾರ್ಯಕ್ಕೆ ಬಂದಿದ್ದ ನೆಂಟರು ನಿರಾಶೆಯಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದ್ದಾರೆ. ಒಬ್ಬರ ವಿರುದ್ಧ ಮತ್ತೊಬ್ಬರು ದೂರುತ್ತಿದ್ದಾರೆ.
ಆದರೆ ಧಾರಾ ಮಹೂರ್ತಕ್ಕೆ ಹುಡುಗನ ಮನೆಯವರು ತಂದಿರುವ ಸೀರೆಯಲ್ಲಿ ಬಾರ್ಡರ್ ಇಲ್ಲ. ಇದನ್ನು ಬದಲಾಯಿಸಿ ಅನ್ನೋ ಕಾರಣಕ್ಕೆ ವಧು-ವರರ ಮನೆಯವರ ನಡುವೆ ಶುರುವಾದ ಜಗಳ ಮದುವೆಯನ್ನೇ ಮುರಿದು ಹಾಕಿದೆ.
ಹುಡುಗ ರಾತ್ರೋರಾತ್ರಿ ಕಣ್ಮರೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರಿಂದ ದಿಕ್ಕು ಕಾಣದಾಗಿರುವ ಹುಡುಗಿ ಮನೆಯವರು ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


