ಬೆಂಗಳೂರು: ಬೊಲೇರೋ ವಾಹನ ಚಾಲಕ ನಿಗೂಢ ಸಾವು, ಮಂಗಳಮುಖಿಯರು ಕೊಲೆ ಮಾಡಿರುವ ಶಂಕೆ
ಹಣ್ಣು ಹಂಪಲು ತುಂಬಿಕೊಂಡು ಬಂದಿದ್ದ ಬೊಲೇರೋ ವಾಹನ ಚಾಲಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಚಳ್ಳಕೆರೆ ಮೂಲದ ಬೊಲೇರೋ ಗೂಡ್ಸ್ ವಾಹನದ ಚಾಲಕ ಬಸವರಾಜ್(26) ಮೃತ ವ್ಯಕ್ತಿ.

ಬೆಂಗಳೂರು: ಹಣ್ಣು ಹಂಪಲು ತುಂಬಿಕೊಂಡು ಬಂದಿದ್ದ ಬೊಲೇರೋ ವಾಹನ ಚಾಲಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಚಳ್ಳಕೆರೆ ಮೂಲದ ಬೊಲೇರೋ ಗೂಡ್ಸ್ ವಾಹನದ ಚಾಲಕ ಬಸವರಾಜ್(26) ಮೃತ ವ್ಯಕ್ತಿ.
ಹಣ್ಣು ತುಂಬಿಕೊಂಡು ಬಂದಿದ್ದ ಚಾಲಕ ಬಸವರಾಜ್ ವಾಹನವನ್ನು ರಸ್ತೆಯ ಬದಿ ನಿಲ್ಲಿಸಿ ಮಂಗಳಮುಖಿಯರ ಜೊತೆ ಹೋಗಿದ್ದ, ಹಣಕ್ಕಾಗಿ ಮಂಗಳಮುಖಿಯರೇ ಆತನನ್ನು ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರಾತ್ರಿ ವೇಳೆ ಹೆದ್ದಾರಿಯಲ್ಲಿ ನಿಂತು ಜನರನ್ನ ಸೆಳೆಯುವ ಮಂಗಳಮುಖಿಯರು, ಕಳೆದ ರಾತ್ರಿ ಅದೇ ರೀತಿಯಲ್ಲಿ ಬಸವರಾಜ್ ನನ್ನು ಕರೆದುಕೊಂಡು ಹೋಗಿದ್ದು ಹಲ್ಲೆ ನಡೆಸಿ ಗಂಭೀರ ಸ್ಥಿತಿಯಲ್ಲಿದ್ದ ಚಾಲಕನನ್ನು ಆಸ್ವತ್ರೆಗೆ ದಾಖಲಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


