ಸಮಯಕ್ಕೆ ಸರಿಯಾಗಿ ಪೊಲೀಸರು ಕ್ರಮ ಕೈಗೊಂಡಿದ್ದರಿಂದ ವಿಸ್ಟ್ರಾನ್ ಸಂಸ್ಥೆಗೆ ಆಗಬಹುದಾಗಿದ್ದ ದೊಡ್ಡ ಪ್ರಮಾಣದ ನಷ್ಟ ತಪ್ಪಿದೆ: ಐಜಿಪಿ
ಸಮಯಕ್ಕೆ ಸರಿಯಾಗಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದ ಪರಿಣಾಮ ಐಫೋನ್ ತಯಾರಿಕಾ ಸಂಸ್ಥೆ ವಿಸ್ಟ್ರಾನ್ ಕಾರ್ಪೋರೇಷನ್ ಗೆ ಸಂಭವಿಸಬಹುದಾಗಿದ್ದ ದೊಡ್ಡ ಪ್ರಮಾಣದ ನಷ್ಟ ತಪ್ಪಿದಂತಾಗಿದೆ ಎಂದು ಕೇಂದ್ರ ವ್ಯಾಪ್ತಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕೋಲಾರ: ಸಮಯಕ್ಕೆ ಸರಿಯಾಗಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಿದ ಪರಿಣಾಮ ಐಫೋನ್ ತಯಾರಿಕಾ ಸಂಸ್ಥೆ ವಿಸ್ಟ್ರಾನ್ ಕಾರ್ಪೋರೇಷನ್ ಗೆ ಸಂಭವಿಸಬಹುದಾಗಿದ್ದ ದೊಡ್ಡ ಪ್ರಮಾಣದ ನಷ್ಟ ತಪ್ಪಿದಂತಾಗಿದೆ ಎಂದು ಕೇಂದ್ರ ವ್ಯಾಪ್ತಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸೀಮಂತ್ ಕುಮಾರ್ ಅವರು, 'ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಫೋನ್ ತಯಾರಿಸುವ ವಿಸ್ಟ್ರಾನ್ ಕಾರ್ಪೊರೇಷನ್‌ನಲ್ಲಿ ಹಿಂಸಾಚಾರದ ದಿನದಂದು ಪೊಲೀಸರು ನಡೆಸಿದ ತ್ವರಿತ ಕ್ರಮವು ಮತ್ತಷ್ಟು ಹಾನಿ ಮತ್ತು ರಕ್ತಪಾತವನ್ನು ತಪ್ಪಿಸಿದೆ. ಪೊಲೀಸರ ಕ್ರಮದಿಂದಾಗಿ ಕಂಪನಿಯು ತನ್ನ ಕಾರ್ಯಾಚರಣೆಯನ್ನು ಶೀಘ್ರವಾಗಿ ಪ್ರಾರಂಭಿಸಲು ಅನುವು ಮಾಡಿಕೊಟ್ಟಂತಾಗಿದೆ ಎಂದು ಹೇಳಿದರು.
ಅಂತೆಯೇ ಹಿಂಸಾಚಾರದ ಬಗ್ಗೆ ಅವರಿಗೆ ಮಾಹಿತಿ ನೀಡಿದ ಕೂಡಲೇ, ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಅವರ ನೇತೃತ್ವದ ಪೋಲಿಸ್ ತಂಡ, ಸ್ಥಳಕ್ಕೆ ಧಾವಿಸಿ ಜನಸಮೂಹವನ್ನು ಚದುರಿಸಿತು. ಅವರ ಸಮಯೋಚಿತ ಕರ್ತವ್ಯ ನಿರ್ವಹಣೆ ಇಲ್ಲದಿದ್ದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಹೋಗದೆ, ಹೆಚ್ಚು ರಕ್ತಪಾತ ಮತ್ತು ಕಂಪನಿಗೆ ದೊಡ್ಡ ನಷ್ಟವಾಗುವ ಸಾಧ್ಯತೆ ಇತ್ತು ಎಂದು ಹೇಳಿದರು.
ಇದೇ ವೇಳೆ ಅಂದು ಕಾರ್ಯಾಚರಣೆ ನಡೆಸಿದ, 'ಎಸ್‌ಪಿ ರೆಡ್ಡಿ ಅವರು ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ಕು ಮಹಿಳೆಯರು ಸೇರಿದಂತೆ 156 ಕಾರ್ಮಿಕರನ್ನು ಬಂಧಿಸಲಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಸ್ಥಳದಿಂದ ಪರಾರಿಯಾಗಿದ್ದ ಮತ್ತು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ ಕಾರ್ಮಿಕರಿಗಾಗಿ ಪೊಲೀಸರು ಶೋಧ ನಡೆಸಲಾಗುತ್ತಿದೆ. ವಿಚಾರಣೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಈ ಬಂಧನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಇನ್ನು ಕಂಪನಿಗೆ ಕಾರ್ಮಿಕರನ್ನು ಸರಬರಾಜು ಮಾಡಿದ ಆರು ಗುತ್ತಿಗೆದಾರ ಸಂಸ್ಥೆಗಳಾದ ಇನ್ನೋವಾ ಸೋರ್ಸ್, ಕ್ರಿಯೇಟಿವ್ ಎಂಜಿನಿಯರ್, ಕ್ವೆಸ್ ಕಾರ್ಪ್, ನೀಡ್ಸ್, ರ್ಯಾಂಡ್ ಸ್ಟ್ಯಾಡ್ ಮತ್ತು ಅಡೆಕೊ ಗ್ರೂಪ್ ಗಳ ಹೇಳಿಕೆಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದಾಖಲಿಸುತ್ತಿದ್ದಾರೆ ಎಂಜು ಪೊಲೀಸ್ ಮೂಲಗಳು ತಿಳಿಸಿವೆ.
ಎಸ್‌ಎಫ್‌ಐ ಧರಣಿ
ವಿಸ್ಟ್ರಾನ್ ಕಾರ್ಪ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ವಿವರವಾದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಎಸ್‌ಎಫ್‌ಐ ಮತ್ತು ಇತರ ಸಂಸ್ಥೆಗಳ ಸದಸ್ಯರು ಶನಿವಾರ ಕೋಲಾರ ಡಿಸಿ ಸತ್ಯಭಾಮ ಕಚೇರಿಯ ಮುಂದೆ ಧರಣಿ ನಡೆಸಿದರು. ಕಾರ್ಮಿಕರಿಗೆ ಬಾಕಿ ಇರುವ ಸಂಬಳವನ್ನು ಪಾವತಿಸಲು ವಿಫಲರಾದ ಕಾರ್ಮಿಕ ಗುತ್ತಿಗೆದಾರರನ್ನು ಬಂಧಿಸುವಂತೆ ಅವರು ಪೊಲೀಸರನ್ನು ಒತ್ತಾಯಿಸಿದರು. ಅಂತೆಯೇ ಬಂಧನಕ್ಕೊಳಗಾದ ಕಾರ್ಮಿಕರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


