ವಿಜಯ ದಿವಸ: ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಗೌರವ ನಮನ
ವಿಜಯ ದಿವಸ ಹಿನ್ನೆಲೆಯಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಬೆಂಗಳೂರು: ವಿಜಯ ದಿವಸ ಹಿನ್ನೆಲೆಯಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ 1971ರಲ್ಲಿ ನಡೆದ ಯುದ್ಧದಲ್ಲಿ ಭಾರತೀಯ ಸೇನೆ ಜಯಗಳಿಸಿದ ಸ್ಮರಣಾರ್ಥ ಇಂದು ವಿಜಯ ದಿವಸವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಾರತೀಯ ಯೋಧರಿಗೆ ಹೃತ್ಪೂರ್ವಕವಾಗಿ ಗೌರವವನ್ನು ಅರ್ಪಿಸಿದ್ದೇನೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಗೊರವ ಸಲ್ಲಿಸಿದ್ದ ಯಡಿಯೂರಪ್ಪ ಅವರು, ವಿಜಯ್ ದಿವಸದಂದು, ನಮ್ಮ ಹುತಾತ್ಮ ವೀರ ಯೋಧರಿಗೆ ನಮನಗಳು. ಭಾರತೀಯ ಸೇನಾ ಪಡೆಗಳ ಶೌರ್ಯ, ಪರಾಕ್ರಮ ಮತ್ತು ಕರ್ತವ್ಯನಿಷ್ಠೆ ನಮ್ಮ ಹೆಮ್ಮೆ. ದೇಶದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ನಮ್ಮ ವೀರಯೋಧರ ಧೈರ್ಯ, ಪರಾಕ್ರಮ, ತ್ಯಾಗ, ಬಲಿದಾನಗಳಿಗೆ ಇಡೀ ದೇಶ ಸದಾ ಋಣಿಯಾಗಿದೆ. 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ಗೆಲುವಿನ ಸಂಸ್ಮರಣೆಯ ಈ ವಿಜಯ ದಿವಸದಂದು ನಮ್ಮ ಹೆಮ್ಮೆಯ ಸೇನಾಪಡೆಗಳಿಗೆ ಗೌರವ ಸಲ್ಲಿಸೋಣ ಎಂದು ಹೇಳಿದ್ದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು, ಪಾಕಿಸ್ತಾನದ ಕಪಿಮುಷ್ಠಿಯಿಂದ ಪೂರ್ವ ಪಾಕಿಸ್ತಾನವನ್ನು ವಿಮುಕ್ತಿಗೊಳಿಸಿ, 'ಬಾಂಗ್ಲಾದೇಶ' ಉದಯಕ್ಕೆ ಕಾರಣವಾದ, ಐತಿಹಾಸಿಕ 'ವಿಜಯ ದಿನ'ದಂದು ಭಾರತೀಯ ಸೈನ್ಯದ ಅಪ್ರತಿಮ ಶೌರ್ಯ, ಸಾಹಸ, ಬಲಿದಾನವನ್ನು ಸ್ಮರಿಸುತ್ತೇವೆ ತಿಳಿಸಿದ್ದಾರೆ.
1971 ರಲ್ಲಿ ಈ ದಿನ, ಪಾಕಿಸ್ತಾನ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಮತ್ತು 91,000 ಸೈನಿಕರು ಭಾರತ ಸೇನೆ ಮತ್ತು ಮುಕ್ತಿ ಭಾಹಿನಿ ಒಳಗೊಂಡ ಮಿತ್ರ ಪಡೆಗಳಿಗೆ ಶರಣಾದರು.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಭಾರತೀಯ ಯೋಧರು ಪಾಕ್ ವಿರುದ್ಧ ಜಯ ಸಾಧಿಸಿದ ಕ್ಷಣಗಳನ್ನು ನೆನೆದು ಪ್ರೇರಣೆಗೊಳ್ಳುವ ದಿನ, ವಿಜಯ್ ದಿವಸ್. ಭಾರತದ ಪರಾಕ್ರಮಕ್ಕೆ ಬೆಚ್ಚಿದ ಪಾಕ್ ಹೆದರಿ 1971ರ ಇದೇ ದಿನದಂದು 93,000 ಸೈನಿಕರೊಂದಿಗೆ ಶರಣಾಯಿತು. ನಾವಷ್ಟೇ ಅಲ್ಲದೇ ಬಾಂಗ್ಲಾದೇಶವೂ ನಮ್ಮ ಸೇನೆಗೆ ಧನ್ಯವಾದ ಹೇಳಬೇಕಾದ ದಿನವಿದು. ನಮ್ಮ ವೀರ ಯೋಧರಿಗೆ ನಮನಗಳು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


