ಬೆಂಗಳೂರು: ನಟ ಬೊಮಾನ್ ಇರಾನಿ ಸಹೋದರಿ ಮನೆಯಲ್ಲಿ ಕಳ್ಳತನ, ಇಬ್ಬರ ಬಂಧನ
ಬಾಲಿವುಡ್ ನಟ ಬೊಮಾನ್ ಇರಾನಿ ಸೋದರ ಸಂಬಂಧಿ ಮನೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್ ಹಾಗೂ ವಿದೇಶಿ ಕರೆನ್ಸಿ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮನೆ ಕೆಲಸದಾಕೆ ಹಾಗೂ ಆಕೆಯ ಪುತ್ರನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಬಾಲಿವುಡ್ ನಟ ಬೊಮಾನ್ ಇರಾನಿ ಸೋದರ ಸಂಬಂಧಿ ಮನೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್ ಹಾಗೂ ವಿದೇಶಿ ಕರೆನ್ಸಿ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮನೆ ಕೆಲಸದಾಕೆ ಹಾಗೂ ಆಕೆಯ ಪುತ್ರನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿಗಳಾದ ಮೇರಿ ಅಲಿಸ್ ಹಾಗೂ ಈಕೆಯ ಮೈಕೆಲ್ ವಿನ್ಸೆಂಟ್ ಬಂಧಿತರು. ಅಬ್ಬಾಸ್ ಅಲಿ ರಸ್ತೆಯಲ್ಲಿರುವ ಎಂಬೆಸ್ಸಿ ಕ್ರೌನ್ ಅಪಾರ್ಟ್‌ಮೆಂಟ್ ನಿವಾಸಿಯೂ ಆದ ಬಾಲಿವುಡ್ ನಟ ಬೊಮನ್ ಇರಾನಿ ಸೋದರ ಸಂಬಂಧಿ ಖುರ್ಷೀದ್ ಇರಾನಿ ಅವರು ಕೊಟ್ಟ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಖುರ್ಷೀದ್ ಇರಾನಿ ಅವರು ಅವರ ಕುಟುಂಬ ಅಬ್ಬಾಸ್ ಅಲಿ ರಸ್ತೆಯಲ್ಲಿರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬ ಸಮೇತ ನೆಲೆಸಿದೆ. ಕಳೆದ 28 ವರ್ಷಗಳಿಂದ ಬಂಧಿತೆ ಮೇರಿ ಖುರ್ಷಿದ್ ಅವರ ಮನೆ ಕೆಲಸ ಮಾಡಿಕೊಂಡಿದ್ದಳು. ಹಲವು ವರ್ಷಗಳಿಂದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೇರಿ ಮನೆಯವರು ನಂಬಿಕೆಗಳಿಸಿದ್ದ ಕಾರಣ, ಆಕೆ ಮನೆಯಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು.
ಖುರ್ಷೀದ್ ಅವರು ಮನೆಯ ಲಾಕರ್‌ನಲ್ಲಿ 100 ಗ್ರಾಂ ತೂಕದ ಒಂಬತ್ತು ಚಿನ್ನದ ಬಿಸ್ಕೆಟ್, .85 ಲಕ್ಷ ನಗದು ಹಾಗೂ 11 ಲಕ್ಷ ಮೌಲ್ಯದ 15 ಸಾವಿರ ಯುಎಸ್ ಕರೆನ್ಸಿಗಳನ್ನು ಇಟ್ಟಿದ್ದರು. ನ.29ರಂದು ಲಾಕರ್ ನೋಡಿದಾಗ ಚಿನ್ನದ ಬಿಸ್ಕೆಟ್, ನಗದು ಹಾಗೂ ವಿದೇಶಿ ಕರೆನ್ಸಿ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಖುರ್ಷೀದ್ ಅವರು ಮನೆ ಕೆಲಸ ಮಾಡುತ್ತಿದ್ದ ಮೇರಿ ಮೇಲೆ ನೇರವಾಗಿ ಆರೋಪ ಹೊರಿಸಿ ಹಲಸೂರು ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೈಯಪ್ಪನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ವೆಂಕಟಾಚಲಪತಿ ನೇತೃತ್ವದ ತಂಡ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಳು. ಈಕೆ ಕೊಟ್ಟಮಾಹಿತಿ ಮೇರೆಗೆ ಆಕೆಯ ಪುತ್ರನನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


