ರಾಜ್ಯ

ರಾಜ್ಯದಲ್ಲಿ ಇಂದು 7,330 ಕೊರೋನಾ ಪ್ರಕರಣ ಪತ್ತೆ: ಬೆಂಗಳೂರಿನಲ್ಲಿ 2,979 ಮಂದಿಗೆ ಸೋಂಕು ದೃಢ

ರಾಜ್ಯದಲ್ಲಿ ಮತ್ತೆ 7,330 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,71,876ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 7,330 ಕೊರೋನಾ ಪ್ರಕರಣ ಪತ್ತೆ: ಬೆಂಗಳೂರಿನಲ್ಲಿ 2,979 ಮಂದಿಗೆ ಸೋಂಕು ದೃಢ
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಮತ್ತೆ 7,330 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,71,876ಕ್ಕೆ ಏರಿಕೆಯಾಗಿದೆ. 

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 2,979 ಸೋಂಕು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ 1,05,749 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇಂದು ಒಂದೇ ದಿನ 3,259 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಒಟ್ಟು 34,224 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದಂತೆ ಬೀದರ್ ನಲ್ಲಿ 82, ಚಾಮರಾಜನಗರ 67, ಚಿಕ್ಕಬಳ್ಳಾಪುರ 79, ಚಿಕ್ಕಮಗಳೂರು 71, ಚಿತ್ರದುರ್ಗ 89, ದಕ್ಷಿಣ ಕನ್ನಡ 228, ದಾವಣಗೆರೆ 277, ಧಾರವಾಡ 253, ಗದಗ 1116, ಹಾಸನ 209, ಹಾವೇರಿ 141, ಕಲಬುರಗಿ 165, ಕೊಡಗು 24, ಕೋಲಾರ 69, ಕೊಪ್ಪಳ 170, ಮಂಡ್ಯ 146, ರಾಯಚೂರು 52,  ರಾಮನಗರ 54, ಶಿವಮೊಗ್ಗ 221, ತುಮಕೂರು 103, ಉಡುಪಿ 368, ಉತ್ತರ ಕನ್ನಡ 64, ವಿಜಯಪುರ 151, ಯಾದಗಿರಿ 123 ಹಾಗೂ ಮೈಸೂರಿನಲ್ಲಿ ಯಾವುದೇ ಪ್ರಕರಣ ದೃಢಪಟ್ಟಿಲ್ಲ. 

ಇನ್ನು ಇಂದು ರಾಜ್ಯಾದ್ಯಂತ 7,626 ಸೋಂಕಿತರು ಗುಣಮುಖರಾಗಿದ್ದು, ಈ ವರೆಗೆ 1,84,568 ಮಂದಿ ಚೇತರಿಸಿಕೊಂಡಿದ್ದಾರೆ. 82,677 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 93 ಮಂದಿ ಮೃತಪಟ್ಟಿದ್ದು, ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 4,615ಕ್ಕೆ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.