ರಾಜ್ಯ

ಗಣೇಶ ಹಬ್ಬಕ್ಕೆ ಕೊರೋನಾ ಕರಿ ನೆರಳು:ಬೆಂಗಳೂರಿನಲ್ಲಿ ಈ ವರ್ಷ ಆಚರಣೆ ಹೇಗೆ, ಬಿಬಿಎಂಪಿ ಹಾಕಿರುವ ನಿಯಮ ಏನು?

ಗೌರಿ-ಗಣೇಶ ಹಬ್ಬವೆಂದರೆ ಬೆಂಗಳೂರಿಗರಿಗೂ ಬಹಳ ವಿಶೇಷ. ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ. ಆದರೆ ಈ ಬಾರಿ ಕೊರೋನಾ ಕರಿಛಾಯೆ ಆವರಿಸಿದೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಲವು ನಿರ್ಬಂಧಗಳನ್ನು ವಿಧಿಸಿದೆ.

ಗಣೇಶ ಹಬ್ಬಕ್ಕೆ ಕೊರೋನಾ ಕರಿ ನೆರಳು:ಬೆಂಗಳೂರಿನಲ್ಲಿ ಈ ವರ್ಷ ಆಚರಣೆ ಹೇಗೆ, ಬಿಬಿಎಂಪಿ ಹಾಕಿರುವ ನಿಯಮ ಏನು?
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು:ಗೌರಿ-ಗಣೇಶ ಹಬ್ಬವೆಂದರೆ ಬೆಂಗಳೂರಿಗರಿಗೂ ಬಹಳ ವಿಶೇಷ. ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬ. ಆದರೆ ಈ ಬಾರಿ ಕೊರೋನಾ ಕರಿಛಾಯೆ ಆವರಿಸಿದೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಲವು ನಿರ್ಬಂಧಗಳನ್ನು ವಿಧಿಸಿದೆ.

ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯೇನೂ ಆಗಿಲ್ಲ. ಹೀಗಾಗಿ ಸಮುದಾಯಗಳಲ್ಲಿ ಗಣೇಶ ಹಬ್ಬವನ್ನು ಈ ಬಾರಿ ಜನದಟ್ಟಣೆ ಸೇರಿಸಿ ಆಚರಿಸುವಂತಿಲ್ಲ. ನಾಡಿದ್ದು ಗಣೇಶ ಹಬ್ಬಕ್ಕೆ ಮೊದಲು ರಾಜ್ಯ ಸರ್ಕಾರದ ಆದೇಶದಂತೆ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಮಾರ್ಗಸೂಚಿ ಹೊರಡಿಸಿದ್ದಾರೆ.

ಬಿಬಿಎಂಪಿ ಮಾರ್ಗಸೂಚಿ ಏನು?:ಸಾರ್ವಜನಿಕ ಸ್ಥಳಗಳಲ್ಲಿ ಮೂರು ದಿನಗಳವರೆಗೆ ಮಾತ್ರ ಗಣೇಶನ ಮೂರ್ತಿ ಇಡಬಹುದು. ಪ್ರತಿ ವಾರ್ಡ್ ಅಥವಾ ಹಳ್ಳಿಗೆ ಒಂದು ಮೂರ್ತಿ ಇಡಬಹುದು, ಗಣೇಶನ ಮೂರ್ತಿ 4 ಅಡಿಗಿಂತ ಹೆಚ್ಚು ಎತ್ತರವಿರಬಾರದು. ಮೂರು ದಿನಗಳಿಗಿಂತ ಜಾಸ್ತಿ ಇಡಬಾರದು, ನಿಗದಿತ ಪ್ರದೇಶಗಳಲ್ಲಿಯೇ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಬೇಕು.

ವಾರ್ಡ್ ಗಳಲ್ಲಿ ಗಣೇಶನ ಮೂರ್ತಿಗಳನ್ನಿಡಲು ವಲಯ ಜಂಟಿ ಆಯುಕ್ತರಿಂದ ಮತ್ತು ಡಿಸಿಪಿಯಿಂದ ಅನುಮತಿ ಪಡೆದಿರಬೇಕು. ಅರ್ಜಿಗಳನ್ನು ತುಂಬಿ ವಿವರ ನೀಡುವಾಗಲೇ ಮೂರ್ತಿಯನ್ನು ಎಲ್ಲಿ ವಿಸರ್ಜಿಸುವುದು ಎಂದು ವಿವರ ನೀಡಬೇಕು. ಸಂಚಾರಿ ಮೂರ್ತಿ ವಿಸರ್ಜನೆಗೆ ಸಹ ಅವಕಾಶವಿದೆ. ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು, ವಿಸರ್ಜಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕು.

ಮನೆಯಲ್ಲಿ ಮೂರ್ತಿಗಳನ್ನು ಹೇಗಿಡಬೇಕು: ಮನೆಗಳಲ್ಲಿಡುವ ಗಣೇಶನ ಮೂರ್ತಿಗಳ ಎತ್ತಡ ಎರಡು ಅಡಿಗಳಿಗಿಂತ ಹೆಚ್ಚಿರಬಾರದು, ಮನೆಗಳಲ್ಲಿಯೇ ಪೂಜೆಯಾದ ನಂತರ ವಿಸರ್ಜಿಸಬೇಕು. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ, ದೊಡ್ಡ ಮಟ್ಟದ ಸಮಾರಂಭ, ಮೆರವಣಿಗೆಗಳನ್ನು ನಿಷೇಧಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.