ಚಾಮರಾಜನಗರ: ಪಂಪ್ ಹೌಸ್ ಕಟ್ಟಡಕ್ಕೆ ಜೋಳ ತುಂಬಿದ್ದ ಲಾರಿ ಡಿಕ್ಕಿ
ಮಹದೇಶ್ವರಬೆಟ್ಟದಿಂದ ಮುಸುಕಿನ ಜೋಳ ತುಂಬಿಕೊಂಡು ಗೋಪಿನಾಥಂ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಂಪ್ ಹೌಸ್ ಕಟ್ಟಡಕ್ಕೆ ಡಿಕ್ಕಿಹೊಡೆದು ಜಖಂ ಗೊಂಡಿರುವ ಘಟನೆ ಪಾಲಾರ್ ಕಡೆ ಬೆಟ್ಟದ ಇಳಿಜಾರಿನಲ್ಲಿ ಸಂಭವಿಸಿದೆ.

ಚಾಮರಾಜನಗರ: ಮಹದೇಶ್ವರಬೆಟ್ಟದಿಂದ ಮುಸುಕಿನ ಜೋಳ ತುಂಬಿಕೊಂಡು ಗೋಪಿನಾಥಂ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಂಪ್ ಹೌಸ್ ಕಟ್ಟಡಕ್ಕೆ ಡಿಕ್ಕಿಹೊಡೆದು ಜಖಂ ಗೊಂಡಿರುವ ಘಟನೆ ಪಾಲಾರ್ ಕಡೆ ಬೆಟ್ಟದ ಇಳಿಜಾರಿನಲ್ಲಿ ಸಂಭವಿಸಿದೆ.
ಪಂಪ್ ಹೌಸ್ ಕಟ್ಟಡಕ್ಕೆ ಲಾರಿ ಡಿಕ್ಕಿಹೊಡೆದ ಪರಿಣಾಮ ಲಾರಿಯ ಮುಂಭಾಗ ಜಖಂ ಗೊಂಡು,ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಮತ್ತು ಪಂಪ್‌ಹೌಸ್ ಸಿಬ್ಬಂದಿಗೆ ಯಾವುದೇ
ಹಾನಿ ಸಂಭವಿಸಿಲ್ಲ.
ಲಾರಿ ಅಪಘಾತ ಸಂಬಂಧ ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ದೂರು ದಾಖಲಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ವರದಿ: ಗುಳಿಪುರ ನಂದೀಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


