ಕೊರೋನಾ ಟೆಸ್ಟ್ ಗೆ ಅಡ್ಡಿ ಪ್ರಕರಣ: ನಾಲ್ವರು ಪತ್ರಕರ್ತರ ವಿರುದ್ಧವೇ ದೂರು ದಾಖಲಿಸಿದ ಕೆ.ಟಿ. ಶ್ರೀಕಂಠೇಗೌಡ!
: ಕಳೆದ ಐದು ದಿನಗಳ ಹಿಂದೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ಕೊರೊನಾ ಟೆಸ್ಟ್ ಗೆ ಅಡ್ಡಿಪಡಿಸಿದ ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಮಗ ಕೃಷಿಕ್ ಗೌಡರೇ ಪತ್ರಕರ್ತರ ವಿರುದ್ದವೇ ದೂರು ದಾಖಲಿಸಿದ್ದಾರೆ

ಮಂಡ್ಯ: ಕಳೆದ ಐದು ದಿನಗಳ ಹಿಂದೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ಕೊರೊನಾ ಟೆಸ್ಟ್ ಗೆ ಅಡ್ಡಿಪಡಿಸಿದ ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಮಗ ಕೃಷಿಕ್ ಗೌಡರೇ ಪತ್ರಕರ್ತರ ವಿರುದ್ದವೇ ದೂರು ದಾಖಲಿಸಿದ್ದಾರೆ
ಪತ್ರಕರ್ತರಾದ ಕೆ.ಎನ್.ನಾಗೇಗೌಡ, ಸುನೀಲ್, ಎಚ್.ಎಸ್.ಮಹೇಶ್, ಮದನ್ ಅವರು,ತಮ್ಮ ತಂದೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ತನ್ನ ಮೇಲೂ ಹಲ್ಲೆ ನಡೆಸಿದ್ದಲ್ಲದೆ ನಿಂದಿಸಿದ್ದಾರೆ ಎಂದು ಆರೋಪಿಸಿ ನಗರದ ಪಶ್ಚಿಮ ಠಾಣೆಯಲ್ಲಿ ದೂರು ದೂರುನೀಡಿದ್ದು ಮಂಗಳವಾರ ರಾತ್ರಿ ಎಫ್‌ಐಆರ್ ದಾಖಲಾಗಿದೆ
‘ಏ.25ರಂದು ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಕೋವಿಡ್ ಪರೀಕ್ಷೆ ವೇಳೆ ಕೆ.ಎನ್.ನಾಗೇಗೌಡ, ಸುನೀಲ್, ಎಚ್.ಎಸ್.ಮಹೇಶ್, ಮದನ್ ಅವರನ್ನೊಳಗೊಂಡ ಪತ್ರಕರ್ತರು ತಮ್ಮ ತಂದೆ ಕೆ.ಟಿ.ಶ್ರೀಕಂಠೇಗೌಡರನ್ನು ನಿಂದಿಸಿ, ಹಾಗೂ ತನ್ನ ಮೇಲೆ ಹಲ್ಲೆ ನಡೆಸಿ ನಿಂದಿಸಿದರು’ ಎಂದು ಕೃಷಿಕ್ ಗೌಡ ಆರೋಪಿಸಿದ್ದಾರೆ
ಕೊರೊನಾ ಟೆಸ್ಟ್ ವೇಳೆ ಆದ ಗಲಾಟೆ ಕುರಿತಂತೆ ತನ್ನ ಹಾಗೂ ತನ್ನ ತಂದೆಯ ವಿರುದ್ದ ಮಾಧ್ಯಮಗಳಲ್ಲಿ ಪ್ರಸಾರವಾದ ಅಪಪ್ರಚಾರದ ವರದಿಗಳಿಂದ ತಮಗೆ ಮಾನಸಿಕವಾಗಿ ಆಘಾತವಾಗಿತ್ತು, ಮಾನಸಿಕ ಹಿಂಸೆಯಿಂದ ಹೊರಬಂದ ನಂತರ ಇದೀಗ ದೂರು ನೀಡುತ್ತಿರುವುದಾಗಿ ತಿಳಿಸಿದ್ದಾರೆ , ದೂರಿನ ಅಂಶಗಳ ಮೇಲೆ ಐಪಿಸಿ ಸೆಕ್ಷನ್ 341,504,323,506 ಮೇಲೆ ಪ್ರಕರಣ ದಾಖಲಿಸಲಾಗಿದೆ,`‘ದೂರು ನೀಡಲು ನಾಲ್ಕು ದಿನ ತಡವಾಗಿದ್ದಕ್ಕೆ ಕಾರಣ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದರು.
ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ: ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್ ಕುರಿತ ಸಭೆಯಲ್ಲಿ ಪತ್ರಕರ್ತರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
ಕೊರೊನಾ ವಾರಿಯರ್ಸ್ ಕರ್ತವ್ಯಕ್ಕೆ ಅಡ್ಡಿ,ಹಲ್ಲೆಯಂತಹ ಕೃತ್ಯಗಳನ್ದ ತಡೆಯಲು ಈಗಾಗಲೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸುಗ್ರೀವಾಜ್ಞೆ ಜಾರಿಗೊಳಿಸಿದೆ,ಆದರೆ ಇದುವರೆಗೂ ಜಿಲ್ಲಾಡಳಿತ ಕ್ರಮಕೈಗೊಳ್ಳದಿರುವ ಕುರಿತು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಅವರ ಪುತ್ರ ಕೃಷಿಕ್ ಗೌಡ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಪುತ್ರ ಸೇರಿದಂತೆ ಹಲವರ ವಿರುದ್ದ ಕೊವಿಡ್ ಟೆಸ್ಟ್ ಗೆ ಅಡ್ಡಿ,ನಿಂದನೆ,ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಿಸಿದ್ದು ಕೆ.ಟಿ.ಶ್ರೀಕಂಠೇಗೌಡ ಮತ್ತು ಅವರ ಪುತ್ರ ಸೇರಿದಂತೆ ಹಲವರು ಕೊರ್ಟ್ ನಲ್ಲಿ ಬೇಲ್ ಪಡೆದುಕೊಂಡಿದ್ದಾರೆ
ವರದಿ: ನಾಗಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


