ಬೆಂಗಳೂರು ಮೂಲದ ಅಮೆರಿಕ ಪ್ರಜೆಗೆ ವಿಶೇಷ ವಿಮಾನದಲ್ಲಿ ತೆರಳಲು ನೆರವಾದ ತುರ್ತು ಪಾಸ್ಪೋರ್ಟ್ ಸೇವೆ!
ಬೆಂಗಳೂರು ಮೂಲದ ಅಮೆರಿಕ ಪ್ರಜೆ ವಿಶೇಷ ವಿಮಾನದಲ್ಲಿ ಅಮೆರಿಕಾಗೆ ತೆರಳಲು ತುರ್ತು ಪಾಸ್ಪೋರ್ಟ್ ಸೇವೆ ನೆರವಾಗಿದೆ.

ಬೆಂಗಳೂರು: ಬೆಂಗಳೂರು ಮೂಲದ ಅಮೆರಿಕ ಪ್ರಜೆ ವಿಶೇಷ ವಿಮಾನದಲ್ಲಿ ಅಮೆರಿಕಾಗೆ ತೆರಳಲು ತುರ್ತು ಪಾಸ್ಪೋರ್ಟ್ ಸೇವೆ ನೆರವಾಗಿದೆ.
ಆರ್ ಎಸ್ ಮಣಿ ಎಂಬುವವರು ಹಲವು ವರ್ಷಗಳಿಂದ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದ್ದು, ವೈಟ್ ಫೀಲ್ಡ್ ನಲ್ಲಿದ್ದ, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ಭಾರತಕ್ಕೆ ಬಂದಿದ್ದರು. ಸಾಫ್ಟ್ ವೇರ್ ಕ್ಷೇತ್ರದಲ್ಲಿರುವ ಮಣಿ ಅವರಿಗೆ ಫೆಬ್ರವರಿಯಲ್ಲಿ ಅಮೆರಿಕಾದ ಪೌರತ್ವ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ದ್ವಿಪೌರತ್ವ ಹೊಂದುವಂತಿರಲಿಲ್ಲ. ಈಗ ಭಾರತೀಯ ಪೌರತ್ವವನ್ನು ಅವರು ಬಿಟ್ಟುಕೊಡಬೇಕಾಗಿತ್ತು. ಅಷ್ಟೇ ಅಲ್ಲದೇ ಕುಟುಂಬ ಸದಸ್ಯರೊಂದಿಗೆ ಇರುವುದಕ್ಕಾಗಿ ಅವರು ವಾಪಸ್ ಅಮೆರಿಕಾಗೆ ತೆರಳಬೇಕಾಗಿತ್ತು.
ಈ ಹಿನ್ನೆಲೆಯಲ್ಲಿ ಮಣಿ ಅವರು ತುರ್ತು ಸೇವೆಗಾಗಿ ಪಾಸ್ಪೋರ್ಟ್ ಕಚೇರಿಯನ್ನು ಸಂಪರ್ಕಿಸಿದ್ದರು. ತಕ್ಷಣವೇ ಸ್ಪಂದಿಸಿದ ಪಾಸ್ಪೋರ್ಟ್ ಕಚೇರಿ ಅಧಿಕಾರಿಗಳು ತುರ್ತು ಸೇವೆ ಒದಗಿಸುವುದಕ್ಕೆ ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಮೆರಿಕನ್ನರಿಗಾಗಿಯೇ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ವಿಮಾನದಲ್ಲಿ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.
ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಅಧಿಕಾರಿ ಭಾರತ್ ಕುಮಾರ್ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದೊಗೆ ಮಾತನಾಡಿದ್ದು ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ ಈಗ ಕಚೇರಿಯಲ್ಲಿ 33 ಜನರು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಕಚೇರಿ ತೆರೆಯುವುದಿಲ್ಲ. ಆಂತರಿಕ ಕೆಲಸಗಳಷ್ಟೇ ಮಾಡಲಾಗುತಿದೆ. ಆದರೆ ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿತ್ತು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


