ಕಚೇರಿಗೆ ಹಾಜರಾಗುವಂತೆ ಸಿಬ್ಬಂದಿಗೆ ಕೆಎಸ್ಆರ್‌ಟಿಸಿ ಸೂಚನೆ: ಹಾಟ್ ಸ್ಪಾಟ್ ಹೊರತುಪಡಿಸಿ ಇತರೆಡೆ ಆರಂಭಗೊಳ್ಳುತ್ತಾ ಬಸ್ ಸಂಚಾರ?
ಎರಡನೇ ಹಂತದ ಲಾಕ್ ಡೌನ್ ಏಪ್ರಿಲ್ 20 ರಂದು ಅವಲೋಕನೆಗೊಳ ಪಡಲಿದ್ದು ನಂತರದಲ್ಲಿ ಹಂತ ಹಂತವಾಗಿ ಸಾರಿಗೆ ಬಸ್ ಗಳನ್ನು ರೆಡ್ ಝೋನ್ ಹೊರತುಪಡಿಸಿ ಇತರೆ ಝೋನ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ರಸ್ತೆಗಿಳಿಸುವ ಸಾಧ್ಯತೆ ಇದೆ.

ಬೆಂಗಳೂರು: ಎರಡನೇ ಹಂತದ ಲಾಕ್ ಡೌನ್ ಏಪ್ರಿಲ್ 20 ರಂದು ಅವಲೋಕನೆಗೊಳ ಪಡಲಿದ್ದು ನಂತರದಲ್ಲಿ ಹಂತ ಹಂತವಾಗಿ ಸಾರಿಗೆ ಬಸ್ ಗಳನ್ನು ರೆಡ್ ಝೋನ್ ಹೊರತುಪಡಿಸಿ ಇತರೆ ಝೋನ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ರಸ್ತೆಗಿಳಿಸುವ ಸಾಧ್ಯತೆ ಇದೆ.
ಸಿಬ್ಭಂದಿಯೊಂದಿಗೆ ಸನ್ನದ್ದರಾಗಿರಿ ಎಂದು ಕೆಎಸ್ಆರ್ ಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ಅಧಿಕಾರಿಗಳಿಗೆ ಸರ್ಕಾರದಿಂದ ಸ್ಪಷ್ಟ ಸಂದೇಶ ರವಾನಿಸಿರುವುದು ರಾಜ್ಯದಲ್ಲಿ ಹಾಟ್ ಸ್ಪಾಟ್ ಹೊರತುಪಡಿಸಿ ಸಾರಿಗೆ ಸಂಚಾರ ಆರಂಭ ಸಾಧ್ಯತೆಯ ಸುಳಿವು ನೀಡಿದೆ.
ಕೆಎಸ್ಆರ್ ಟಿಸಿಯ ಎಲ್ಲಾ ವರ್ಗಗಳ ಸಿಬ್ಬಂದಿಗಳನ್ನು ನಾಳೆಯಿಂದಲೇ ಕಚೇರಿಗೆ ಆಗಮಿಸುವಂತೆ ವ್ಯವಸ್ಥಾ ಪಕ ನಿರ್ದೇಶಕ ಶಿವಯೋಗಿ ಕಳಸದ ನಿರ್ದೇಶನ ನೀಡಿದ್ದಾರೆ. ಕೇಂದ್ರ ಕಚೇರಿ,ವಿಭಾಗೀಯ ಕಚೇರಿ, ಮುದ್ರಣಾ ಲಯ,ತರಬೇತಿ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಸಿಬ್ಬಂದಿ ಕೂಡಲೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದ್ದಾರೆ.
ಇಲಾಖೆಯನ್ನು ಸರ್ಕಾರ ಅಗತ್ಯ ಸೇವೆ ಎಂದು ಪರಿಗಣಿಸಿದೆ.ಅತೀ ಅವಶ್ಯಕತೆ ಕಂಡು ಬಂದಲ್ಲಿ ವಾಹನಗಳನ್ನು ಆಯ್ದ ಮಾರ್ಗಗಳಲ್ಲಿ ಚಾಲನೆ ಮಾಡಲು ಸರ್ವ ಸನ್ನದ್ದವಾಗಿರತಕ್ಕದ್ದು ಎಂದು ಸಂದೇಶ ರವಾನೆ ಮಾಡಿದೆ ಆ ಮೂಲಕಲಾಕ್ ಡೌನ್ ಸಡಿಲಿಕೆ ಹಾಗು ಸಾರಿಗೆ ಸೇವೆಯ ಅಗತ್ಯತೆ ಆಧಾರದಂತೆ ಹಂತ ಹಂತವಾಗಿ ಬಸ್ ಗಳನ್ನು ರಸ್ತೆಗಿಳಿಸಲಾಗುತ್ತದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


