ಕ್ರಿಕೆಟ್ ವಿಚಾರವಾಗಿ ನಡೆದ ಜಗಳಕ್ಕೆ ವಿದ್ಯಾರ್ಥಿ ಜೀವವೇ ಹೋಯ್ತು!
ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಂದಿನಿ ಲೇಔಟ್‍ನ ಸರಸ್ವತಿಪುರದಲ್ಲಿ ನಡೆದಿದೆ.

ಬೆಂಗಳೂರು: ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಂದಿನಿ ಲೇಔಟ್‍ನ ಸರಸ್ವತಿಪುರದಲ್ಲಿ ನಡೆದಿದೆ.
20 ವರ್ಷದ ಉಮಾ ಮಹೇಶ್ವರ ಕೊಲೆಯಾದ ವಿದ್ಯಾರ್ಥಿ.
`
ನವರಂಗ್ ಬಳಿಯ ಎಂಇಎಸ್ ಕಾಲೇಜಿನಲ್ಲಿ ಬಿಬಿಎಂ ಪದವಿ ಓದುತ್ತಿದ್ದ ಗಣೇಶ ಬ್ಲಾಕ್‌ನ ಉಮಾಮಹೇಶ್ವನನ್ನು ಕೊಲೆಗೈದ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ
ಕಳೆದೆರಡು ದಿನಗಳ ಹಿಂದೆ ಕ್ರಿಕೆಟ್ ಆಡುವ ವಿಚಾರದಲ್ಲಿ ಸ್ನೇಹಿತರೊಡನೆ ಉಮಾಮಹೇಶ್ವರ್ ಜಗಳವಾಡಿ ಓರ್ವನ ಕೆನ್ನೆಗೆ ಬಲವಾಗಿ ಹೊಡೆದಿದ್ದ. ಅದಾಗ ಅವನ ಸ್ನೇಹಿತರು ಜಗಳ ಬಿಡಿಸಿ ಬುದ್ದಿ ಹೇಳಿ ಹಿಂದೆ ಕಳಿಸಿದ್ದರು.
ಆದರೆ ಕೆನ್ನೆಗೆ ಬಾರಿಸಿಕೊಂಡ ಸ್ನೇಹಿತ ಮಾತ್ರ ದ್ವೇಷದಿಂದ ಕಾಯುತ್ತಿದು ಮಂಗಳವಾರ ಸಂಜೆ ಏಳರ ಏಳೆ ಮೂವರು ಸ್ನೇಹಿತರ ಗುಂಪಿನೊಡನೆ ಹ್ಗಣೇಶ ಬ್ಲಾಕ್ ನಲ್ಲಿ ಉಮಾಮಹೇಶ್ವರನೊಂದಿಗೆ ಜಗಳ ತೆಗೆದಿದ್ದಾನೆ. ಆಗ ಜಗಳ ವಿಕೋಪಕ್ಕೆ ತಿರುಗಿ ಉಮಾಮಹೇಶ್ವರನ ಕಿಬ್ಬೊಟ್ಟೆಗೆ ಚಾಕುವಿನಿಂದ ಚುಚ್ಚಲಾಗಿದೆ. ಸ್ಥಳೀಯರು ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲ ನೀಡದೆ ಆತ ಮೃತಪಟ್ಟಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


