ಸೆ. 19ರಂದು ತೇಜಸ್‌ನಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್ ಹಾರಾಟ
ಬೆಂಗಳೂರಿನಲ್ಲಿ ದೇಶಿಯವಾಗಿ ಅಭಿವೃದ್ದಿಪಡಿಸಿರುವ ಲಘು ಸಮರ ವಿಮಾನ (ಎಲ್‌ಸಿಎ) ತೇಜಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ 19 ರಂದು (ಗುರುವಾರ) ಹಾರಾಟ ನಡೆಸಲಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.

ಬೆಂಗಳೂರು: ಬೆಂಗಳೂರಿನಲ್ಲಿ ದೇಶಿಯವಾಗಿ ಅಭಿವೃದ್ದಿಪಡಿಸಿರುವ ಲಘು ಸಮರ ವಿಮಾನ (ಎಲ್‌ಸಿಎ) ತೇಜಸ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ 19 ರಂದು (ಗುರುವಾರ) ಹಾರಾಟ ನಡೆಸಲಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.
ರಕ್ಷಣಾ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಸಂಪೂರ್ಣ ದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವುತ್ತಿದ್ದಾರೆ.
ತೇಜಸ್ ನಾಲ್ಕುವರೆ ತಲೆಮಾರಿನ ಲಘು ಸಮರ ವಿಮಾನವಾಗಿದ್ದು, ಇದನ್ನು ಸರ್ಕಾರಿ ಏರೋಸ್ಪೇಸ್ ಬೆಹೆಮೊಥ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿದೆ. ಕಳೆದ ಶುಕ್ರವಾರ ಗೋವಾದಲ್ಲಿ ಇದರ ನಿರ್ಣಾಯಕ ಪರೀಕ್ಷೆ ನಡೆಸಲಾಗಿತ್ತು ಇದು ವಿಮಾನವಾಹಕ ನೌಕೆಯಿಂದ ತೇಜಸ್ ತನ್ನ ಕಾರ್ಯಾಚರಣೆ ನಡೆಸಲು ಕೇವಲ ಇನ್ನು ಒಂದು ಹೆಜ್ಜೆಯಷ್ಟೇ ಮಾತ್ರ ಬಾಕಿಯಿದೆ.
ಭಾರತೀಯ ನೌಕಾಪಡೆಗಾಗಿಯೇ ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಯುದ್ಧ ವಿಮಾನ ತಯಾರಿಕಾ ಸರಣಿಯ ಒಂದು ಭಾಗವಾಗಿದೆ.ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ ಭಾರತೀಯ ನೌಕೆ ವಿಕ್ರಮಾದಿತ್ಯದಲ್ಲಿ ತೇಜಸ್ ಸಮರ ವಿಮಾನ ಮುಂದಿನ ಕಾರ್ಯಾಚರಣೆ ನಡೆಸಲು ಈ ಮೂಲಕ ಹಾದಿ ಸುಗಮವಾಗಲಿದೆ ಎಂದೂ ಇಲಾಖೆ ಹೇಳಿಕೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


