ರಾಜ್ಯ

ವಿಶೇಷ ಪೂಜೆ ಮಾಡಿಸುವ ನೆಪದಲ್ಲಿ ಅರ್ಚಕನಿಂದ ಮಹಿಳೆ ಮೇಲೆ ಲೈಂಗಿಕ ಹಲ್ಲೆ; ದೂರು ದಾಖಲು 

ವಿಶೇಷ ಸಂಪ್ರದಾಯ ಆಚರಣೆ ನೆಪ ಹೇಳಿಕೊಂಡು ಅರ್ಚಕ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಶೇಷ ಪೂಜೆ ಮಾಡಿಸುವ ನೆಪದಲ್ಲಿ ಅರ್ಚಕನಿಂದ ಮಹಿಳೆ ಮೇಲೆ ಲೈಂಗಿಕ ಹಲ್ಲೆ; ದೂರು ದಾಖಲು 
ಸಾಂಕೇತಿಕ ಚಿತ್ರ
Published On :

ಬೆಂಗಳೂರು; ವಿಶೇಷ ಸಂಪ್ರದಾಯ ಆಚರಣೆ ನೆಪ ಹೇಳಿಕೊಂಡು ಅರ್ಚಕ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.


ಅರ್ಚಕನ ವಿರುದ್ಧ ಪೊಲೀಸರು ಸೆಕ್ಷನ್ 354ಎ ಮತ್ತು 354 ಬಿಯಡಿ ಕೇಸು ದಾಖಲಿಸಲಾಗಿದೆ.


ಮಹಿಳೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕಳೆದ 10ರಂದು ಕೇಸು ದಾಖಲಿಸಿದ್ದರು. ವೈಯಕ್ತಿಕ ಸಮಸ್ಯೆ ಹೊತ್ತು ಮಹಿಳೆ ಅರ್ಚಕನ ಬಳಿ ಹೋದಾಗ ಅರ್ಚಕ ಎರಡು ಪೂಜೆ ಮಾಡಿಸುವಂತೆ ಹೇಳಿದ್ದಾನೆ. ಒಂದು ಪೂಜೆ ಇಲ್ಲಿ ಮತ್ತೊಂದು ಪೂಜೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಡಿಸಬೇಕೆಂದು ಹೇಳಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗುವಾಗ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಲು ಯತ್ನಿಸಿದನು ಎಂದು ಮಹಿಳೆ ದೂರಿನಲ್ಲಿ ಹೇಳಿರುವುದಾಗಿ ಪೊಲೀಸ್ ಉಪ ಆಯುಕ್ತ ರಾಹುಲ್ ಕುಮಾರ್ ತಿಳಿಸಿದ್ದಾರೆ.


ದೂರಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.