ರಾಜ್ಯ

ರೂ.5 ಟಿಕೆಟ್'ಗಾಗಿ ಜಗಳ: ಬಿಎಂಟಿಸಿ ಬಸ್ ನಿರ್ವಾಹಕನಿಗೆ ಚೂರಿ ಇರಿದ ಪ್ರಯಾಣಿಕ!

ರೂ.5 ಟಿಕೆಟ್ ಗಾಗಿ ಪ್ರಯಾಣಿಕ ಹಾಗೂ ಬಿಎಂಟಿಸಿ ಬಸ್ ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಾತಿನ ಚಕಮಕಿ ವೇಳೆ ನಿರ್ವಾಹಕನ ಮೇಲೆ ಕೆಂಡಾಮಂಡಲಗೊಂಡಿರುವ ಪ್ರಯಾಣಿಕನೊಬ್ಬರ ಚೂರಿ ಇರಿದಿರುವ ಘಟನೆ ಮೈಸೂರು ರಸ್ತೆಯಲ್ಲಿ ನಡೆದಿದೆ.

ರೂ.5 ಟಿಕೆಟ್'ಗಾಗಿ ಜಗಳ: ಬಿಎಂಟಿಸಿ ಬಸ್ ನಿರ್ವಾಹಕನಿಗೆ ಚೂರಿ ಇರಿದ ಪ್ರಯಾಣಿಕ!
ಸಂಗ್ರಹ ಚಿತ್ರ
Published On :

ಬೆಂಗಳೂರು: ರೂ.5 ಟಿಕೆಟ್ ಗಾಗಿ ಪ್ರಯಾಣಿಕ ಹಾಗೂ ಬಿಎಂಟಿಸಿ ಬಸ್ ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಾತಿನ ಚಕಮಕಿ ವೇಳೆ ನಿರ್ವಾಹಕನ ಮೇಲೆ ಕೆಂಡಾಮಂಡಲಗೊಂಡಿರುವ ಪ್ರಯಾಣಿಕನೊಬ್ಬರ ಚೂರಿ ಇರಿದಿರುವ ಘಟನೆ ಮೈಸೂರು ರಸ್ತೆಯಲ್ಲಿ ನಡೆದಿದೆ. 

ಲೋಕೇಶ್ (43) ಇರಿತಕ್ಕೊಳಗಾದ ಬಿಎಂಟಿಸಿ ಬಸ್ ನಿರ್ವಾಹಕರಾಗಿದ್ದಾರೆ. ಮಂಜುನಾಥ್ ಚೂರಿ ಇರಿದ ಆರೋಪಿ ಎಂದು ಹೇಳಲಾಗುತ್ತಿದೆ. 

ಸಿಟಿ ಮಾರುಕಟ್ಟೆಯಲ್ಲಿ ಬಸ್ ಹತ್ತಿರುವ ಮಂಜುನಾಥ್ (30) ಮೈಸೂರು ಸರ್ಕಲ್'ಗೆ ತೆರಳುವುದಾಗಿ ಹೇಳಿ ರೂ.5 ಟಿಕೆಟ್ ಪಡೆದುಕೊಂಡಿದ್ದಾನೆ. ಮೈಸೂರು ಸರ್ಕಲ್ ಬಂದರೂ ಬಸ್ ಇಳಿಯದ ಮಂಜುನಾಥ್ ಮುಂದಿನ ನಿಲ್ದಾಣ ಟೋಲ್ಗೆಟ್'ನಲ್ಲಿ ಇಳಿದಿದ್ದಾನೆ. ಮುಂದಿನ ನಿಲ್ದಾಣಕ್ಕೆ ತೆರಳಲು ಆರೋಪಿ ಟಿಕೆಟ್ ಪಡೆದುಕೊಂಡಿರಲಿಲ್ಲ. ಆರೋಪಿ ಬಸ್ ಇಳಿಯುವುದನ್ನು ಗಮನಿಸಿದ ಲೋಕೇಶ್ ಅವರು ಕೂಡಲೇ ತಡೆದು ಸೂಕ್ತ ಟಿಕೆಟ್ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಚೆಕ್ಕಿಂಗ್'ಗೆ ಅಧಿಕಾರಿಗಳು ಬಂದರೆ ನನಗೆ ಕಷ್ಟವಾಗುತ್ತದೆ. ರೂ.5 ಕೊಟ್ಟು ಮತ್ತೊಂದು ಟಿಕೆಟ್ ಪಡೆಯಿರಿ ಎಂದು ತಿಳಿಸಿದ್ದಾರೆ. ಮಾತಿನ ಚಕಮಕಿ ಬಳಿಕ ಮಂಜುನಾಥ್ ಮತ್ತೆ ರೂ.5 ಕೊಟ್ಟು ಮತ್ತೊಂದು ಟಿಕೆಟ್ ಪಡೆದಿದ್ದಾರೆ. ಬಳಿಕ ಲೋಕೇಶ್ ಅವರು ಮತ್ತೆ ಈ ರೀತಿಯ ಕೆಲಸಗಳನ್ನು ಮಾಡಬೇಡಿ. ಈ ರೀತಿಯ ಮಾಡುವುದರಿಂದ ನಮ್ಮ ಕೆಲಸ ಹೋಗುತ್ತದೆ ಎಂದು ಹೇಳಿದ್ದಾರೆ. 

ಇದರಿಂದ ಕೆಂಡಾಮಂಡಲಗೊಂಡಿರುವ ಮಂಜುನಾಥ್ ನಿರ್ವಾಹಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಜೇಬಿನಲ್ಲಿದ್ದ ಚಾಕುವಿನಿಂದ ಲೋಕೇಶ್ ಅವರ ಎರಡೂ ಕೈಗಳ ಮೇಲೆ ಚೂರಿಯಿಂದ ಇರಿದಿದ್ದಾನೆ. ಈ ವೇಳೆ ಎಚ್ಚೆತ್ತ ಬಸ್ ಚಾಲಕ ಬಸ್ ನಿಲ್ಲಿಸದೆಯೇ ಚಾಲನೆ ಮಾಡಿ, ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಲೋಕೇಶ್ ನೀಡಿದ ದೂರಿನ ಅನ್ವಯ ಪೊಲೀಸರು ಮಂಜುನಾಥ್'ನನ್ನು ಬಂಧನಕ್ಕೊಳಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.