ಕುಡಿದ ಮತ್ತಿನಲ್ಲಿ ಮಹಿಳೆಯ ಜೊತೆ ಅನುಚಿತ ವರ್ತನೆ: ಆಟೋ ಚಾಲಕನ ಬಂಧನ
ಕುಡಿದ ಮತ್ತಿನಲ್ಲಿ ಮಹಿಳಾ ಪ್ರಯಾಣಿಕೆ ಜೊತೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ಬಂಧಿಸಲಾಗಿದೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಮಹಿಳಾ ಪ್ರಯಾಣಿಕೆ ಜೊತೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕನನ್ನು ಬಂಧಿಸಲಾಗಿದೆ.
ಘಟನೆ ಬಗ್ಗೆ ತಿಳಿದ ಎಚ್ ಎಸ್ ಆರ್ ಲೇಔಟ್ ಪೊಲೀಸರು ಆಗಮಿಸಿ ಚಾಲಕನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.
ಮಂಗಮ್ಮನಪಾಳ್ಯ ನಿವಾಸಿ ತಿಮ್ಮೇಗೌಡ ಬಂಧಿತ ಆರೋಪಿ, ಎಚ್ ಎಸ್ ಆರ್ ಲೇಔಟ್ ನಿವಾಸಿ ಶಶಾ ಎಂಬುವರು ದಾಖಲಿಸಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.,
ಶಶಾ ಬೊಮ್ಮನಹಳ್ಳಿಯಲ್ಲಿರುವ ಆನ್ ಲೈನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಶನಿವಾರ ಸಂಜೆ 7 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಚಾಲಕ ಮಧ್ಯ ಸೇವಿಸಿದ್ದ, ಸುಮಾರು 700 ಮೀಟರ್ ಮುಂದೆ ಹೋದ ನಂತರ ಆತನಿಗೆ ಎಲ್ಲಿ ಹೋಗಬೇಕು ಎಂಬುದು ತಿಳಿಯಲಿಲ್ಲ.
ಈ ವೇಳೆ ಶಶಾಗೆ ಅನುಮಾನ ಬಂದು ಆಟೋವನ್ನು ನಿಲ್ಲಿಸಲು ಹೇಳಿದ್ದಾರೆ. ಆದರೆ ಆತ ನಿಲ್ಲಿಸಲಿಲ್ಲ, ಕೂಡಲೇ ಆಕೆ ಜೋರಾಗಿ ಕೂಗಿ ಕೊಂಡಿದ್ದಾರೆ, ಈ ವೇಳೆ ಚಾಲಕ ಆಟೋ ನಿಲ್ಲಿಸಿ ಮಹಿಳೆ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಆಕೆಯನ್ನು ಮುಖ್ಯರಸ್ತೆಗೆ ಬಿಡುವಂತೆ ಹೇಳಿದ್ದಾರೆ, ಅದಕ್ಕೆ ಒಪ್ಪಿಕೊಂಡ ನಂತರ ಆತ ಸಿಪಿಡಬ್ಲ್ಯೂಡಿ ಕ್ವಾರ್ಟರ್ಸ್ ವರೆಗೆ ಕರೆದು ಕೊಂಡು ಹೋಗಿದ್ದ, ಶಶಾ ಆಟೋ ಇಂದ ಕೆಳಗಿಳಿಯುವ ವೇಳೆ ತಾನು ಪ್ರಯಾಣ ಮಾಡಿದ್ದ ದೂರದ ವರೆಗ ಹಣ ನೀಡಲು ಮುಂದಾದಾಗ ಆಕೆಯಿಂದ 500 ರು ಕಸಿದುಕೊಂಡಿದ್ದಾನೆ.
ಈ ವೇಳೆ ಹಣ ವಾಪಸ್ ನೀಡುವಂತೆ ಕೇಳಿದ್ದಕ್ಕೆ ಆಕೆಯ ಕಣ್ಣೀರು ಒರೆಸಲು ಮುಂದಾದ ಆತ ಆಕೆಯ ದೇಹದ ಮೇಲೆ ಕೈಯ್ಯಾಡಿಸಿದ್ದಾನೆ, ಜೊತೆಗೆ ಆಕೆಯ ಬಟ್ಟೆ ಹರಿದಿದ್ದಾನೆ,ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ, ಶಶಾ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ, ಸ್ಥಳಕ್ಕೆ ಧಾವಿಸಿದ ಗಸ್ತು ತಿರುಗುತ್ತಿದ್ದ ಹೊಯ್ಸಳ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


