ಬಂಡಿಪುರ: ಆನೆ ದಾಳಿಯಿಂದ ವ್ಯಕ್ತಿಗೆ ಗಂಭೀರ ಗಾಯ, ಜಾನುವಾರು ಬಲಿ
ಆನೆ ದಾಳಿಗೆ ದಾನಗಾಹಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ನಡೆದಿದೆ.

ಚಾಮರಾಜನಗರ: ಆನೆ ದಾಳಿಗೆ ದಾನಗಾಹಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ನಡೆದಿದೆ.
ಆನೆ ದಾಳಿಗೆ ವ್ಯಕ್ತಿ ಗಂಭೀರ ಮಲ್ಲಯ್ಯನಹುಂಡಿ ಸಿದ್ದಯ್ಯ ಗಾಯಗೊಂಡ ವ್ಯಕ್ತಿ. ಈತ ಕಲ್ಲುಕಟ್ಟೆ ಹಳ್ಳದ ಬಳಿ ದನ ಮೇಯಿಸುತ್ತಾ ಕುಳಿತಿದ್ದ. ಈ ವೇಳೆ ಬಳಿಗೆ ಬಂದ ಆನೆ ಈತನನ್ನು ಎತ್ತಿ ಬಿಸಾಡಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಜೊತೆಗೆ ಆನೆ ದಾಳಿಗೆ ಹಸು ಕೂಡಾ ಬಲಿಯಾಗಿದೆ. ಇದಾದ ಬಳಿಕ ಜಮೀನುಗಳ ಮಾರ್ಗದಲ್ಲೇ ಶಿವಪುರ ಸಮೀಪದ ಹಂಗಳಪುರಕ್ಕೆ ಆನೆ ತೆರಳಿದೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಒಂಟಿ ಸಲಗನಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಮಧುಮಲೈ ಅರಣ್ಯ ಪ್ರದೇಶದಿಂದ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ.
ಕಳೆದ ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ನರಹಂತಕ ಹುಲಿ ಮತ್ತು ಚಿರತೆ ಸಾಕಷ್ಟು ಜನರಿಗೆ ಉಪಟಳ ನೀಡಿದ್ದವು. ಈಗ ಗಜರಾಜನ ಅಟ್ಟಹಾಸದಿಂದ ಜನ ಹೈರಣಾಗಿದ್ದಾರೆ.
ವರದಿ: ನಂದೀಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


