ಹಾಸನ: ನದಿಯಲ್ಲಿ ಈಜಲು ಹೋದ 3 ಯುವಕರು ನೀರುಪಾಲು, ಇಬ್ಬರ ಮೃತದೇಹ ಪತ್ತೆ
ಮಂಗಳವಾರ ಯಗಚಿ ನದಿಯಲ್ಲಿ ಈಜಲು ತೆರಳಿದ್ದಾಗ ಮುಳುಗಿ ಸಾವನ್ನಪ್ಪಿದ್ದ ಮೂವರು ಯುವಕರ ಪೈಕಿ ಇಬ್ಬರ ಶವಗಳು ಪತ್ತೆಯಾಗಿದೆ. ಎನ್‌ಡಿಆರ್‌ಎಫ್ ತುರ್ತು ನಿಗಾ ಘಟಕದ ಸಹಕಾರದಿಂದ ಆಲೂರು ಪೊಲೀಸರು ಶವಗಳನ್ನು ಪತ್ತೆ ಮಾಡಿದ್ದಾರೆ.

ಹಾಸನ: ಮಂಗಳವಾರ ಯಗಚಿ ನದಿಯಲ್ಲಿ ಈಜಲು ತೆರಳಿದ್ದಾಗ ಮುಳುಗಿ ಸಾವನ್ನಪ್ಪಿದ್ದ ಮೂವರು ಯುವಕರ ಪೈಕಿ ಇಬ್ಬರ ಶವಗಳು ಪತ್ತೆಯಾಗಿದೆ. ಎನ್‌ಡಿಆರ್‌ಎಫ್ ತುರ್ತು ನಿಗಾ ಘಟಕದ ಸಹಕಾರದಿಂದ ಆಲೂರು ಪೊಲೀಸರು ಶವಗಳನ್ನು ಪತ್ತೆ ಮಾಡಿದ್ದಾರೆ.
ಈಜುಗಾರರು ಹುನಸುವಳ್ಳಿಯ ರತನ್ ಮತ್ತು ಭೀಮರಾಜ್ ಎನ್ನುವವರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.ಇನ್ನೋರ್ವ ಯುವಕ ಮನುವಿನ ಪತ್ತೆಗೆ ಶೋಧ ಮುಂದುವರಿದಿದೆ.
ಸ್ಥಳೀಯ ಈಜುಗಾರರ 20 ಗಂಟೆಗಳ ನಿರಂತರ ಪ್ರಯತ್ನ ವಿಫಲವಾದ ಹಿನ್ನೆಲೆ ಪೋಲೀಸರು ಎನ್‌ಡಿಆರ್‌ಎಫ್ ತಂಡವನ್ನು ಕರೆಸಿದ್ದರು. ಇದೀಗ ಯುವಕರು ನೀರಿಗಿಳಿದಿದ್ದ ಸ್ಥಳದಿಂದ 500 ಮೀಟರ್ ದೂರದಲ್ಲಿ ರತನ್ ದೇಹ ಪತ್ತೆಯಾಗಿದ್ದರೆ ದ ಐದು ಕಿ.ಮೀ ದೂರದಲ್ಲಿ ಭೀಮರಾಜ್ ಮೃತದೇಹ ದೊರಕಿದೆ.
ರತನ್, ಭೀಮರಾಜ್, ಮನು, ಸಂಜಯ್ ಮತ್ತು ಧನು- ಐದು ಮಂದಿ ಮಂಗಳವಾ ಯಗಚಿ ನದಿಗೆ ಈಜಲು ತೆರಳಿದ್ದರು.ಈ ವೇಳೆ ಮೂವರು ನೀರಲ್ಲಿ ಕೊಚ್ಚಿ ಹೋದರೆ ಅದೃಷ್ಟವಶಾತ್, ಸಂಜಯ್ ಮತ್ತು ಧನು ದಡ ಸೇರುವಲ್ಲಿ ಸಫಲವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


