ರಾಜ್ಯ

ಬೆಂಗಳೂರು: ವಿದೇಶದಿಂದ ಬರುತ್ತಿದ್ದ 1 ಕೋಟಿ ರೂ ಡ್ರಗ್ಸ್ ಜಪ್ತಿ

ಕೆನಡಾ ದೇಶದಿಂದ ಭಾರತಕ್ಕೆ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ, 1 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ‌.

ಬೆಂಗಳೂರು: ವಿದೇಶದಿಂದ ಬರುತ್ತಿದ್ದ 1 ಕೋಟಿ ರೂ ಡ್ರಗ್ಸ್ ಜಪ್ತಿ
ಬೆಂಗಳೂರು: ವಿದೇಶದಿಂದ ಬರುತ್ತಿದ್ದ 1 ಕೋಟಿ ರೂ ಡ್ರಗ್ಸ್ ಜಪ್ತಿ
Published On :

ಬೆಂಗಳೂರು:  ಕೆನಡಾ ದೇಶದಿಂದ ಭಾರತಕ್ಕೆ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿ, 1 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ‌.

ಕೋಲ್ಕತ್ತಾ ಮೂಲದ ಆತೀಫ್ ಸಲೀಂ ಎಂಬಾತ ಡಾರ್ಕ್ ವೆಬ್ ಸೈಟ್ ಮೂಲಕ ಕೆನಡಾ ಮೂಲದ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಂಪರ್ಕಿಸಿ ಗಾಂಜಾ ಚಾಕೊಲೇಟ್ ಮತ್ತು ಆಶಿಷ್ ಆಯಿಲ್ ಎಂಬ ಮಾದಕ ವಸ್ತುವಿರುವ ಇ-ಸಿಗ್ರೇಟ್ ಟ್ಯೂಬ್ ಗಳನ್ನು ತರಿಸಿಕೊಳ್ಳುತ್ತಿದ್ದ. ಅವುಗಳನ್ನು ಕೆನಡಾದ ವ್ಯಕ್ತಿ ಸೂಚಿಸುವ ವಿಳಾಸಕ್ಕೆ ಅಮೆಜಾನ್ ಕವರ್ ಗಳಿಂದ ಪ್ಯಾಕ್ ಮಾಡಿ ಕೊರಿಯರ್ ಮೂಲಕ ಬೆಂಗಳೂರು ಹಾಗೂ ದೇಶದ ನಗರಗಳಿಗೆ ಸಾಗಾಟ ಮಾಡುತ್ತಿದ್ದ. ಅಲ್ಲದೇ ಒಟ್ಟಾರೆ ಕಳುಹಿಸಿದ ಮಾದಕ ವಸ್ತುಗಳಲ್ಲಿ ಕಾಲು ಭಾಗದಷ್ಟು ತಾನೇ ಇಟ್ಟುಕೊಳ್ಳುತ್ತಿದ್ದ ಎಂದು ಆರೋಪಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಸ್ಟಮ್ ಅಧಿಕಾರಿಗಳಿಗೆ ಅನುಮಾನ ಬಾರದಂತೆ ಮಕ್ಕಳ ಹಾಲಿನ ಪೌಡರ್ ಡಬ್ಬಿಗಳಲ್ಲಿ ಹೈಡ್ರೋ ಗಾಂಜಾ ಬಚ್ಚಿಟ್ಟು ಕೆನಡಾದಿಂದ ಕೊರಿಯರ್ ಮೂಲಕ ಭಾರತಕ್ಕೆ ರವಾನಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. 

ಇನ್ನು ಆರೋಪಿಗಳು ಈ ಡ್ರಗ್ಸ್ ಅನ್ನು ಚಾಕೊಲೇಟ್ ಹಾಗೂ ಪೆಪ್ಪರ್​ಮೆಂಟ್ ಬಾಕ್ಸ್​ಗಳಲ್ಲಿ ಸಾಗಿಸುತ್ತಿದ್ದು ಇದನ್ನು ತಿಂದವರಿಗೆ ಬುದ್ದಿಮತ್ತೆ ಹೆಚ್ಚಲಿದೆ ಎಂದು ಪ್ರಚಾರ ನಡೆಸಿದ್ದರು.

ಬಂಧಿಸಲ್ಪಟ್ಟ ಆರೋಪಿಯಿಂದ ಒಂದು ಕಾರು, ಬೈಕ್, ವೇಯಿಂಗ್ ಮಷಿನ್ ಹಾಗೂ 1 ಲಕ್ಷ ರೂ.ನಗದನ್ನು ವಶಕ್ಕೆ ಪಡೆಯಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.