ರಾಜ್ಯ

ಕಿರಿಯ ವೈದ್ಯೆಯ ಮೇಲೆ ವೈದ್ಯಾಧಿಕಾರಿಯಿಂದ ಹಲವು ಬಾರಿ ಅತ್ಯಾಚಾರ, ಖಾಸಗಿ ಆಸ್ಪತ್ರೆ ವೈದ್ಯ ಅರೆಸ್ಟ್

ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ 29 ವರ್ಷದ ವೈದ್ಯೆಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಆರೋಪದ ಹಿನ್ನೆಲೆ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯನನ್ನು ಶ್ರೀನಿವಾಸನ್ ಎಂದು ಗುರುತಿಸಲಾಗಿದೆ.

ಕಿರಿಯ ವೈದ್ಯೆಯ ಮೇಲೆ ವೈದ್ಯಾಧಿಕಾರಿಯಿಂದ ಹಲವು ಬಾರಿ ಅತ್ಯಾಚಾರ, ಖಾಸಗಿ ಆಸ್ಪತ್ರೆ ವೈದ್ಯ ಅರೆಸ್ಟ್
ಸಂಗ್ರಹ ಚಿತ್ರ
Published On :

ಬೆಂಗಳೂರು: ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ 29 ವರ್ಷದ ವೈದ್ಯೆಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಆರೋಪದ ಹಿನ್ನೆಲೆ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯನನ್ನು ಶ್ರೀನಿವಾಸನ್ ಎಂದು ಗುರುತಿಸಲಾಗಿದೆ.

ರಕ್ಷಾ (ಹೆಸರು ಬದಲಾಯಿಸಲಾಗಿದೆ) ಸಲ್ಲಿಸಿದ ದೂರಿನ ಪ್ರಕಾರ, ಜೆ.ಪಿ.ನಗರದ ಅಂಜನಾಪುರ ನಿವಾಸಿಯಾದ ಹಿರಿಯ ವೈದ್ಯ ಡಾ.ಶ್ರೀಧರ್ ಶ್ರೀನಿವಾಸನ್ ಬಂಧನವಾಗಿದೆ. ಆರೋಪಿಯು ರಕ್ಷಾ ಮೇಲೆ ಅನೇಕ ಬಾರಿ ಅತ್ಯಾಚಾರ ನಡೆಸಿದ್ದಾನೆ. ರಕ್ಷಾ ಶ್ರೀನಿವಾಸನ್ ಕೈಕೆಳಗೆ ಖಾಸಗಿ ಆಸ್ಪತ್ರೆಯಲ್ಲಿ ದುಡಿಯುತ್ತಿದ್ದರು. . ಆಗಸ್ಟ್ 8, 2018 ರಂದು, ರಕ್ಷಾ ತನ್ನ ಅಪಾರ್ಟ್ಮೆಂಟ್ ಗೆ ಕೆಲಸದ ಬಗ್ಗೆ ಚರ್ಚಿಸಲು ಹೋದಾಗ ಆತ ಅವಳಿಗೆ ಮದ್ಯವನ್ನು ನೀಡಿದ್ದಾನೆ. ಆಕೆ ಮದ್ಯ ಸೇವನೆ ನಿರಾಕರಿಸಿದಾಗ "ನಿನ್ನ ಕೆಲಸದ ಬಗೆಗೆ ಒಳ್ಳೇ ವಿಮರ್ಶೆ ನೀಡಬೇಕೆಂದರೆ ನೀನು ನನಗೆ ಸಹಕರಿಸಬೇಕು, ನನಗೆ ಉತ್ತಮ ಸಹಕಾರ ನೀಡಿದರೆ ನಾನು ನಿನ್ನ ಭವಿಷ್ಯವನ್ನು ಉತ್ತಮಗೊಳಿಸುತ್ತೇನೆ " ಎಂದು ಹೇಳಿದ್ದಾನೆ. ರಕ್ಷಾ ಅದಕ್ಕೆ ಒಲ್ಲೆ ಎಂದು ಮನೆಯಿಂದ ಹೊರಡಲು ತೀರ್ಮಾನಿಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ಥೆ ವಿವರಿಸಿದ್ದಾರೆ.

ಆ ದಿನ ಇಡೀ ರಾತ್ರಿ ಆಕೆಯನ್ನು ಮನೆಯಲ್ಲೇ ಕೂಡಿ ಹಾಕಿದ್ದಲ್ಲದೆ ಟನೆಯ ಬಗ್ಗೆ ಯಾರೊಂದಿಗೂ ಮಾತನಾಡದಂತೆ ಬೆದರಿಕೆ ಹಾಕಿದ್ದಾನೆ. ಆಕೆ ತನ್ನ ಬಗ್ಗೆ ದೂರಿತ್ತದೆ ಆಕೆಯ ವೃತ್ತಿಜೀವನ ಹಾಳು ಮಾಡುವುದಾಗಿ ಆರೋಪಿ ಬೆದರಿಸಿದ್ದನು. . ಈ ಹಿಂದೆ ದೂರು ನೀಡಿಲ್ಲವಾದ್ದರಿಂದ ಆತನ ವಿರುದ್ಧ ಹೋರಾಡಲು ಹೆದರುತ್ತಿದ್ದದ್ದಾಗಿ ರಕ್ಷಾ ಪೋಲೀಸರಿಗೆ ಹೇಳಿದ್ದಾರೆ.

ಇನ್ನು ಒಂದೆರಡು ಬಾರಿ ಅವಳನ್ನು ಖಾಸಗಿಯಾಗಿ ಭೇಟಿಯಾದ ನಂತರ, ಶ್ರೀನಿವಾಸನ್ ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ.  ಅವಳಿಂದಲೂ ಹಣವನ್ನು ಎರವಲು ಪಡೆದನು, . ಅಕ್ಟೋಬರ್ 2, 2019 ರಂದು ಅವರು ಕೋಣನಕುಂಟೆ   ಹೋಟೆಲ್ ಬಳಿ ಅವಳನ್ನು ಕರೆದು ಮತ್ತೆ ಅವಳಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ.  ಅವಳು ಅವನಿಗೆ ಹಣ ನೀಡಲು ನಿರಾಕರಿಸಿದಾಗ, ಅವನು ಅವಳ ಮೇಲೆ ಹಲ್ಲೆ ಮಾಡಿದನು. ಆ ಘಟನೆಯ ನಂತರ ರಕ್ಷಾ ಶ್ರೀನಿವಾಸನ್ ಜೊತೆ ಮಾತನಾಡಲಿಲ್ಲ

ಇದಾಗಿ ನವೆಂಬರ್ 12 ರಂದು, ಅವರಿಬ್ಬರ ನಡುವೆ ಹಣದ ಬಗ್ಗೆ ವಾಗ್ವಾದ ನಡೆಸಿದ ನಂತರ ಅವನು ಮತ್ತೆ ಅವಳ ಮೇಲೆ ಅತ್ಯಾಚಾರ ಮಾಡಿದನು. 

ಸದ್ಯ ಪೋಲೀಸರು ಶ್ರೀನಿವಾಸನ್ ವಿರುದ್ಧ  ಅತ್ಯಾಚಾರ, ಮೋಸ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ದಾಖಲಿಸಿದ್ದಾರೆ. . “ನಾವು ಶ್ರೀನಿವಾಸನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಇದು ಕೇವಲ ಇಬ್ಬರ ನಡುವಿನ ದೈಹಿಕ ಸಂಬಂಧ ವಿಚಾರವಾಗಿಯೆ ಇದೆಯೆ ಅಥವಾ ಇನ್ನೇನಾದರೂ ಅಂಶಗಳು ಇದೆಯೆ ಎನ್ನುವುದು ತನಿಖೆ ನಡೆಯಬೇಕು" ಪೋಲೀಸ್ ಅಧಿಕಾರಿ ಹೇಳಿದ್ದಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.