ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿದ ಹಣ ದೋಚಿದ ಕಳ್ಳರು
ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿ ಬೈಕ್ ನಲ್ಲಿಟ್ಟಿದ್ದ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯಾಹ್ನ ನಗರದ ಕೆ.ಆರ್.ಪುರಂ ಸಮೀಪದ ಭಟ್ಟರಹಳ್ಳಿ ಉಡುಪಿ ಗಾರ್ಡನ್ ಹೋಟೆಲ್

Published On :
ಬೆಂಗಳೂರು: ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿ ಬೈಕ್ ನಲ್ಲಿಟ್ಟಿದ್ದ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯಾಹ್ನ ನಗರದ ಕೆ.ಆರ್.ಪುರಂ ಸಮೀಪದ ಭಟ್ಟರಹಳ್ಳಿ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.
ಶ್ರೀನಾಥ್ ಎಂಬುವವರು ಮಗನ ಶಾಲಾ ಶುಲ್ಕ ಹಾಗೂ ಪುಸ್ತಕ ಖರೀದಿಗಾಗಿ ಆವಲಹಳ್ಳಿಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ 48 ಸಾವಿರ ರೂ. ಹಣ ಡ್ರಾ ಮಾಡಿದ್ದರು. ನಂತರ ಪತ್ನಿ, ಮಗನೊಂದಿಗೆ ಊಟ ಮಾಡಲು ಓಲ್ಡ್ ಮದ್ರಾಸ್ ರಸ್ತೆಯ ಭಟ್ಟರಹಳ್ಳಿ ಉಡುಪಿ ಗಾರ್ಡನ್ ಹೋಟೆಲ್ ತೆರಳುವಾಗ ಡ್ರಾ ಮಾಡಿದ ಹಣವನ್ನ ತಮ್ಮ ಆಕ್ಟೀವಾ ಬೈಕ್ ನ ಡಿಕ್ಕಿಯಲ್ಲಿ ಇಟ್ಟಿದ್ದಾರೆ. ಈ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆವಲಹಳ್ಳಿ ಬ್ಯಾಂಕ್ ನಿಂದ ಸುಮಾರು 2 ಕಿ.ಮೀ ದೂರದವರೆಗೆ ಶ್ರೀನಾಥ್ ಅವರನ್ನು ಆರೋಪಿಗಳು ಹಿಂಬಾಲಿಸಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ದುಡ್ಡು ಕಳೆದುಕೊಂಡ ದಂಪತಿಗಳು ಕಂಗಾಲಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


