ರಾಜ್ಯ

ಪಾರ್ಕಿಂಗ್ ವಿಚಾರವಾಗಿ ಚಿತ್ರಮಂದಿರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ, ಆರೋಪಿಗಳ ಬಂಧನ

ಚಿತ್ರ ವೀಕ್ಷಿಸಲು ಬಂದಿದ್ದ ವ್ಯಕ್ತಿ ಹಾಗೂ ಸಿಬ್ಬಂದಿ ನಡುವೆ ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ನಗರದ ಲಾವಣ್ಯ ಚಿತ್ರಮಂದಿರದಲ್ಲಿ ನಡೆದಿದೆ.

ಪಾರ್ಕಿಂಗ್ ವಿಚಾರವಾಗಿ ಚಿತ್ರಮಂದಿರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ, ಆರೋಪಿಗಳ ಬಂಧನ
ಲಾವಣ್ಯ ಥಿಯೇಟರ್
Published On :

ಬೆಂಗಳೂರು: ಚಿತ್ರ ವೀಕ್ಷಿಸಲು ಬಂದಿದ್ದ ವ್ಯಕ್ತಿ ಹಾಗೂ ಸಿಬ್ಬಂದಿ ನಡುವೆ ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ನಗರದ ಲಾವಣ್ಯ ಚಿತ್ರಮಂದಿರದಲ್ಲಿ ನಡೆದಿದೆ.

ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಕ್ಷೀಪ್ರಗತಿಗತಿಯಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.ಲಾವಣ್ಯ ಚಿತ್ರಮಂದಿರದ ಸಿಬ್ಬಂದಿ ಸೆಲ್ವರಾಜ್ ಬಿನ್ ಕಣ್ಣನ್ (50) ಹಾಗೂ ಶೇಖರ್ (20) ಬಂಧಿತ ಆರೋಪಿಗಳು.

ನಗರದ ಆಸ್ಷೀನ್ ಟೌನ್ ನ ಭರಣಿಧರನ್ (38) ಎಂಬಾತ ನಿನ್ನೆ ಗುರುವಾರ ಸಂಜೆ 4.30ಕ್ಕೆ ಕಾಂಚನಾ-3 ಚಿತ್ರ ವೀಕ್ಷಿಸಲು ಲಾವಣ್ಯ ಚಿತ್ರಮಂದಿರಕ್ಕೆ ತಮ್ಮ ಸಂಬಂಧಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದರು.

ಪಾರ್ಕಿಂಗ್ ಶುಲ್ಕದ ವಿಚಾರವಾಗಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಭರಣಿಧರನ್, ಸಿಬ್ಬಂದಿ ಸೆಲ್ವರಾಜ್ ಮೇಲೆ ಹಲ್ಲೆ ಮಾಡಿದ್ದರು.ಇದರಿಂದ ಕೋಪಗೊಂಡ ಸೆಲ್ವರಾಜ್ ಚಿತ್ರಮಂದಿರದ ಹೌಸ್ ಕೀಪಿಂಗ್ ಕೆಲಸ ಮಾಡುವ ಶೇಖರ್ ಜೊತೆಗೂಡಿ ಭರಣಿಧರನ್ ಮೇಲೆ ಹಲ್ಲೆ ನಡೆಸಿದಾಗ ಆತ ಅಲ್ಲೇ ಕುಸಿದು ಬಿದ್ದು ಮೂರ್ಛೆ ಹೋಗಿದ್ದಾನೆ.ತಕ್ಷಣಕ್ಕೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ, ವೈದ್ಯರು ಮಾರ್ಗಮಧ್ಯೆದಲ್ಲಿಯೇ ಭರಣಿಧರನ್ ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಕುರಿತು ಭರಣಿಧರನ್ ತಂದೆ ವೈಕುಂಠೇಶ್ವರನ್ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಉಪ ಪೊಲೀಸ್ ಆಯುಕ್ತ ರಾಹುಲ್ ಕುಮಾರ್ ಶಹಪುರವಾಡ್ ನಿರ್ದೇಶನದ ಮೇರೆಗೆ ಪೊಲೀಸ್ ವಿಶೇಷ ತಂಡ ಕ್ಷೀಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.