ಬೆಂಗಳೂರು: ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಗೆ ಕೇಂದ್ರ ಸಚಿವ ಸದಾನಂದಗೌಡ ಚಾಲನೆ
ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಗೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕಮ ಅನುಷ್ಠಾನ ಸಚಿವ ಡಿ. ವಿ. ಸದಾನಂದಗೌಡ ಇಂದಿಲ್ಲಿ ಚಾಲನೆ ನೀಡಿದರು.

ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಗೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕಮ ಅನುಷ್ಠಾನ ಸಚಿವ ಡಿ. ವಿ. ಸದಾನಂದಗೌಡ ಇಂದಿಲ್ಲಿ ಚಾಲನೆ ನೀಡಿದರು.
ಈ ಯೋಜನೆಯಡಿ ಯಾವುದೇ ಕೆಲಸ ಇಲ್ಲದ ಕಾರ್ಮಿಕರಿಗೂ 60 ವರ್ಷ ಪೂರ್ಣಗೊಳಿಸಿದ ನಂತರ ಕನಿಷ್ಠ ಪಿಂಚಣಿ ಸೌಲಭ್ಯದ ಖಾತ್ರಿ ಒದಗಿಸಲಾಗುತ್ತಿದೆ. ಇಎಸ್ ಐ ಅಥವಾ ಪಿಎಫ್ ಸೌಲಭ್ಯ ಇಲ್ಲದೆ ಪ್ರತಿ ತಿಂಗಳು 15 ಸಾವಿರಕ್ಕಿಂತಲೂ ಕಡಿಮೆ ಆದಾಯ ಗಳಿಸುತ್ತಿರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಈ ಯೋಜನೆಗಾಗಿ ನೋಂದಾಯಿಸಲು ಬಯಸುವ ಜನರು ವಯಸ್ಸಿಗನುಗುಣವಾಗಿ ಪ್ರತಿ ತಿಂಗಳು 55 ರಿಂದ 200 ರೂ. ಪಾವತಿಸಬೇಕಾಗುತ್ತದೆ. 18 ವರ್ಷದವರು ಪ್ರತಿ ತಿಂಗಳು 55 ರೂ ಹಾಗೂ 40 ವರ್ಷದವರು ಪ್ರತಿ ತಿಂಗಳು 200 ರೂ. ಪಾವತಿಸಬೇಕಾಗುತ್ತದೆ. ಇದಕ್ಕೆ ಸಮನಾದ ಹಣವನ್ನು ಕೇಂದ್ರ ಸರ್ಕಾರ ಯೋಜನೆಯಡಿ ಪ್ರತಿತಿಂಗಳು ನೀಡುತ್ತದೆ ಎಂದು ಹೇಳಿದರು.
ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದಾಗಿ ಸದಾನಂದಗೌಡ ತಿಳಿಸಿದರು. ಇದೇ ಕಾರ್ಯಕ್ರಮದ ವೇಳೆ 10 ಫಲಾನುಭವಿಗಳಿಗೆ ಯೋಜನೆಯ ಕಾರ್ಡ್ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


