ಕರ್ನಾಟಕದಲ್ಲಿ ಸದ್ಯದಲ್ಲಿಯೇ ಡ್ರೋನ್ ಮೂಲಕ ಭೂ ಸಮೀಕ್ಷೆ ವಿಧಾನ ಜಾರಿ
ಡ್ರೋನ್ ಆಧಾರಿತ ಸಮೀಕ್ಷೆಯಲ್ಲಿ ಯಶಸ್ಸು ಕಂಡುಬಂದ ನಂತರ ಕಂದಾಯ ಇಲಾಖೆ ಭಾರತೀಯ ಭೂ ಸಮೀಕ್ಷೆ...

Published On :
ಬೆಂಗಳೂರು: ಡ್ರೋನ್ ಆಧಾರಿತ ಸಮೀಕ್ಷೆಯಲ್ಲಿ ಯಶಸ್ಸು ಕಂಡುಬಂದ ನಂತರ ಕಂದಾಯ ಇಲಾಖೆ ಭಾರತೀಯ ಸಮೀಕ್ಷೆ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಮೂಲಕ ರಾಜ್ಯದಲ್ಲಿ ಜಮೀನುಗಳ ಸಮೀಕ್ಷೆ ನಡೆಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಇನ್ನು ಕರ್ನಾಟಕದಾದ್ಯಂತ ಡ್ರೋನ್ ಮತ್ತು ಮಾನವರಹಿತ ವಿಮಾನ ವಾಹಕಗಳ ಮರು ಸಮೀಕ್ಷೆ ನಡೆಯಲಿದೆ.
ಈ ತಂತ್ರಜ್ಞಾನವನ್ನು ಇತ್ತೀಚೆಗೆ ಬೆಂಗಳೂರಿನ ಜಯನಗರದಲ್ಲಿ ಮತ್ತು ರಾಮನಗರ ಪಟ್ಟಣದಲ್ಲಿ ಪ್ರಾಯೋಗಿಕ ಸಮೀಕ್ಷೆಯನ್ನು ಕಂದಾಯ ಇಲಾಖೆ ಕೈಗೊಂಡಿತ್ತು. ಮೊದಲ ಹಂತದಲ್ಲಿ ತುಮಕೂರು, ಹಾಸನ, ಉತ್ತರ ಕನ್ನಡ, ಬೆಳಗಾವಿ, ರಾಮನಗರ ಮತ್ತು ಬೆಂಗಳೂರು ನಗರಗಳಲ್ಲಿ ಡ್ರೋನ್ / ಮಾನವರಹಿತ ವಿಮಾನ ವಾಹಕಗಳ ಮೂಲಕ ಜಮೀನಿನ ಸಮೀಕ್ಷೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


