ರಾಜ್ಯ

ಬೆಂಗಳೂರು: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಚಲನಚಿತ್ರ ವಿತರಕ ಸಾವು

ಭಾನುವಾರ ಸಂಜೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರು: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಚಲನಚಿತ್ರ ವಿತರಕ ಸಾವು
ಅಜಯ್ ಚಂದಾನಿ
Published On :
ಬೆಂಗಳೂರು: ಭಾನುವಾರ ಸಂಜೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರನೊಬ್ಬ  ಸಾವನ್ನಪ್ಪಿರುವ ಘಟನೆ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ನಡೆದಿದೆ. ಬೈಕ್ ಚಲಾಯಿಸುವಾಗ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ತನಿಖೆ ನಡೆಸಿರುವ ಹೈಗ್ರೌಡ್ಸ್ ಪೋಲೀಸರು ಹೇಳಿದ್ದಾರೆ.
ಮೃತನನ್ನು ಚಲನಚಿತ್ರ ವಿತರಕನಾಗಿದ್ದ ಅಜಯ್ ಚಂದಾನಿ ಎಂದು ಗುರುತಿಸಲಾಗಿದೆ.ಅವರು ತಾಯಿ ಮೀನಾ ಚಂದಾನಿ ಅವರೊಂದಿಗೆ ಸ್ಯಾಂಕಿ ರಸ್ತೆ ಬಳಿಯ ಅಬ್ಶಾಟ್ ಲೇಔಟ್ ನಲ್ಲಿ ವಾಸವಿದ್ದರು.
ಭಾನುವಾರ ಸಂಜೆ  5.30 ಕ್ಕೆ ಚಂದಾನಿ ತನ್ನ ಸ್ಪೋರ್ಟ್ಸ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಅತಿಯಾದ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದರು.  ಆಗ ಅಕಸ್ಮಾತ್ ತನ್ನ ನಿಯಂತ್ರಣ ಕಳೆದುಕೊಂಡಿದ್ದಾರೆ.ಆಗ ಬೈಕ್ ವಿದ್ಯುತ್ ಕಂಬಕ್ಕೆ ಗುದ್ದಿದೆ, ಸವಾರ ಚಂದಾನಿ ಬೈಕಿನಿಂದ ಎಸೆಯಲ್ಪಟ್ಟು ಅಪಾರ್ಟ್ ಮೆಂಟ್ ಒಂದರ ಗೊಡೆಗೆ ಡಿಕ್ಕಿಯಾಗಿದ್ದಾರೆ.
ಅಪಘಾತದಲ್ಲಿ ಗಾಯಾಳುವಾಗಿದ್ದ ಅವರನ್ನು ತಕ್ಷಣ ಟ್ರಾಫಿಕ್ ಪೋಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲನೀಡದೆ ಮೃತಪಟ್ಟಿದ್ದಾರೆ.
. ಘಟನೆಯ ಬಗ್ಗೆ ಚಂದಾನಿಯ ತಾಯಿಗೆ ಮಾಹಿತಿ ನೀಡಲಾಗಿದ್ದು, ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.