ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಹಂಪಿಗೆ 2ನೇ ಸ್ಥಾನ: ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಪಾರಂಪರಿಕ ನಗರಿ
2019ರಲ್ಲಿ ನೀವು ನೋಡಲೇಬೇಕಾದ ಜಾಗತಿಕ ಪ್ರವಾಸಿ ತಾಣಗಳಲ್ಲಿ ರಾಜ್ಯದ ಐತಿಹಾಸಿಕ, ವಿಶ್ವಪರಂಪರೆ ತಾಣ ಹಂಪಿ ಎರಡನೇ ಸ್ಥಾನ ಪಡೆದಿದೆ.

Published On :
ಬಳ್ಳಾರಿ: 2019ರಲ್ಲಿ ನೀವು ನೋಡಲೇಬೇಕಾದ ಜಾಗತಿಕ ಪ್ರವಾಸಿ ತಾಣಗಳಲ್ಲಿ ರಾಜ್ಯದ ಐತಿಹಾಸಿಕ, ವಿಶ್ವಪರಂಪರೆ ತಾಣ ಹಂಪಿ ಎರಡನೇ ಸ್ಥಾನ ಪಡೆದಿದೆ. "ದಿ ನ್ಯೂಯಾರ್ಕ್ ಟೈಮ್ಸ್" ಪತ್ರಿಕೆ ಬಿಡುಗಡೆ ಮಾಡಿರುವ 2019ರಲ್ಲಿ ನೋಡಬೇಕಾದ ಟಾಪ್ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ ಸಿಕ್ಕಿದೆ.
ಇನ್ನು ಹಂಪಿ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪ್ರವಾಸಿ ಸ್ಥಳ ಎನ್ನುವುದು ಗಮನಾರ್ಹ ಅಂಶ. ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ವಿಜಯನಗರದ ವೈಭವಕ್ಕೆ ಸಾಕ್ಷಿಯಾಗಿದ್ದ ಈ ನಗರಿ ಹಲವಾರು ದೇವಾಲ, ವಿಶಾಲವಾದ ಮಾರುಕಟ್ಟೆ ಬೀದಿಗಳನ್ನು ಹೊಂದಿದೆ. ಇಲ್ಲಿ ನೂರಕ್ಕೂ ಅಧಿಕ ಮಂಟಪಗಳು, ದೇವಾಲಯಗಳಿದ್ದು ಇತಿಹಾಸ ಪ್ರೇಮಿಗಳು, ಪ್ರವಾಸಿಗರ ಮನಸೂರೆಗೊಳ್ಳೂತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Hampiಹಂಪಿನ್ಯೂಯಾರ್ಕ್ ಟೈಮ್ಸ್The New York TimesNew York Times List Of 52 Places To Go In 2019Vijayanagara Empire2019 ರಲ್ಲಿನೋಡಬೇಕಾದ ಪ್ರವಾಸಿ ತಾಣಗಳ ಪಟ್ಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


